ವಿರಾಟ್ ಕೊಹ್ಲಿ-ರಹಾನೆ ಮೇಲೆ ನಿಂತಿದೆ 4ನೇ ಟೆಸ್ಟ್ ಪಂದ್ಯ

By Web DeskFirst Published Sep 2, 2018, 5:45 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ತಿರುವು ಪಡೆದುಕೊಳ್ಳುತ್ತಿದೆ. ಗೆಲುವಿಗೆ 245 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ ಹಲವು ಅಡೆ ತಡೆ ಎದುರಿಸುತ್ತಿದೆ. 4ನೇ ದಿನದ ಅಪ್‌ಡೇಟ್ಸ್ ಇಲ್ಲಿದೆ.

ಸೌತಾಂಪ್ಟನ್(ಸೆ.02): 4ನೇ ಟೆಸ್ಟ್ ಪಂದ್ಯದಲ್ಲಿ 245 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಟೀಂ ಇಂಡಿಯಾಗೆ ಇದೀಗ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಸರೆಯಾಗಿದ್ದಾರೆ. ದಿಢೀರ್ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಕೊಹ್ಲಿ ಹಾಗೂ  ರಹಾನೆ ಅಲ್ಪ ಚೇತರಿಕೆ ನೀಡಿದ್ದಾರೆ.

ಇಂಗ್ಲೆಂಡ್ ತಂಡವನ್ನ 2ನೇ ಇನ್ನಿಂಗ್ಸ್‌ನಲ್ಲಿ 271 ರನ್‌ಗಳಿಗೆ ಆಲೌಟ್ ಮಾಡಿ, ಕಣಕ್ಕಿಳಿದ ಟೀಂ ಇಂಡಿಯಾ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಶೂನ್ಯ ಸುತ್ತಿದ್ದರು.  ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಚೇತೇಶ್ವರ್ ಪೂಜಾರ  2ನೇ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಸಿಡಿಸಿ ಔಟಾದರು.

3 ಬೌಂಡರ್ ಸಿಡಿಸಿ ಉತ್ತಮ ಪ್ರದರ್ಶನ ನೀಡೋ ಸೂಚನೆ ನೀಡಿದ ಶಿಖರ್ ಧವನ್ 17  ರನ್ ಸಿಡಿಸಿ ಔಟಾದರು.  ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಚೇತರಿಕೆ ನೀಡಿದ್ದಾರೆ. 

ಸ್ಯಾಮ್ ಕುರ್ರನ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದ ರಹಾನೆಗೆ ಅಂಪೈರ್ ಔಟ್ ತೀರ್ಪು ನೀಡಿದ್ದರು. ಆದರೆ ರಿವ್ಯೂವ್ ಮೂಲಕ ರಹಾನೆ ಮತ್ತೆ ಕ್ರೀಸ್ ಕಾಯ್ದುಕೊಂಡರು. ಭೋಜನ ವಿರಾಮದ ವೇಳೆ ಭಾರತ 3 ವಿಕೆಟ್ ನಷ್ಟಕ್ಕೆ 46 ರನ್‌ಗಳಿಸಿದೆ. ಈ ಮೂಲಕ ಗೆಲುವಿಗೆ 199 ರನ್ ಗಳಿಸಬೇಕಿದೆ.
 

click me!