ನಿಮಗೆ ಧೋನಿ ಸಿಕ್ಕಿದ್ದೆಲ್ಲಿ..? ಮುಶ್ರಫ್ ಪ್ರಶ್ನೆಗೆ ದಾದಾ ಖಡಕ್ ಉತ್ತರ

By Web DeskFirst Published Nov 26, 2018, 4:48 PM IST
Highlights

ಭಾರತ-ಪಾಕಿಸ್ತಾನ ನಡುವೆ ಲಾಹೋರ್’ನಲ್ಲಿ ನಡೆದ ಮೂರನೇ ಏಕದಿನ ಪಂದ್ಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಶರಫ್, ತುಂಬಾ ಜನ ಧೋನಿ ಹೇರ್’ಕಟ್ ಮಾಡಿಕೊಳ್ಳಲಿ ಎಂದು ಭಿತ್ತಿಪತ್ರ ತೋರಿಸುತ್ತಿದ್ದಾರೆ. ನನ್ನ ಮಾತನ್ನು ನೀವು ಕೇಳುವುದಾದರೆ ಈ ಕೇಶ ವಿನ್ಯಾಸವೇ ನಿಮಗೆ ಚೆನ್ನಾಗಿ ಕಾಣಿಸುತ್ತದೆ. ದಯವಿಟ್ಟು ಹೇರ್’ಸ್ಟೈಲ್ ಬದಲಾಯಿಸಿಕೊಳ್ಳಬೇಡಿ ಎಂದು ಹೇಳಿದ್ದರು.

ನವದೆಹಲಿ[ನ.26]: ಮಹೇಂದ್ರ ಸಿಂಗ್ ಧೋನಿಯ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿ ಅವರ ಆಟಕ್ಕಿಂತ, ಧೋನಿಯ ಹೇರ್’ಸ್ಟೈಲ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಧೋನಿ ಬಿಟ್ಟುಕೊಂಡಿದ್ದ ಉದ್ದಕೂದಲಿನ ಕೇಶವಿನ್ಯಾಸಕ್ಕೆ ಸ್ವತಃ ಪಾಕಿಸ್ತಾನದ ಅಂದಿನ ಅಧ್ಯಕ್ಷ ಫರ್ವೇಜ್ ಮುಶರಫ್ ಮನಸೋತಿದ್ದರು. 

ಭಾರತ-ಪಾಕಿಸ್ತಾನ ನಡುವೆ ಲಾಹೋರ್’ನಲ್ಲಿ ನಡೆದ ಮೂರನೇ ಏಕದಿನ ಪಂದ್ಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಶರಫ್, ತುಂಬಾ ಜನ ಧೋನಿ ಹೇರ್’ಕಟ್ ಮಾಡಿಕೊಳ್ಳಲಿ ಎಂದು ಭಿತ್ತಿಪತ್ರ ತೋರಿಸುತ್ತಿದ್ದಾರೆ. ನನ್ನ ಮಾತನ್ನು ನೀವು ಕೇಳುವುದಾದರೆ ಈ ಕೇಶ ವಿನ್ಯಾಸವೇ ನಿಮಗೆ ಚೆನ್ನಾಗಿ ಕಾಣಿಸುತ್ತದೆ. ದಯವಿಟ್ಟು ಹೇರ್’ಸ್ಟೈಲ್ ಬದಲಾಯಿಸಿಕೊಳ್ಳಬೇಡಿ ಎಂದು ಹೇಳಿದ್ದರು.

ಹೀಗಿತ್ತು ನೋಡಿ ಮುಶರಫ್ ಹೇಳಿದ ಮಾತು..

ಲಾಹೋರ್’ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 289 ರನ್’ಗಳ ಗುರಿಯನ್ನು ಭಾರತ ಅನಾಯಾಸವಾಗಿ ತಲುಪಿತ್ತು. ಧೋನಿ ಕೇವಲ 46 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸಿದ್ದರು. ಜತೆಗೆ ಪಂದ್ಯ ಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದರು.

ಇದೀಗ ಆ ಸಂದರ್ಭದಲ್ಲಿ ಮುಶರಫ್ ಜತೆಗಿನ ಮಾತುಕತೆಯನ್ನು ನೆನಪು ಮಾಡಿಕೊಂಡಿರುವ ಸೌರವ್ ಗಂಗೂಲಿ ಸ್ವಾರಸ್ಯಕರ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ನನಗಿನ್ನು ನೆನಪಿದೆ ಫರ್ವೇಜ್ ಮುಶರಫ್ ನನ್ನ ಬಳಿ ನಿಮಗೆ ಧೋನಿ ಎಲ್ಲಿ ಸಿಕ್ಕಿದ ಎಂದು ಕೇಳಿದ್ದರು. ಆಗ ನಾನು, ಆತ ವಾಘಾ ಗಡಿ ಬಳಿ ಓಡಾಡುತ್ತಿದ್ದ, ಅವನನ್ನು ಅಲ್ಲಿಂದು ಎಳೆದುಕೊಂಡು ಬಂದ್ವಿ ಎಂದು ಹೇಳಿದ್ದೆ ಎಂದಿದ್ದಾರೆ.

2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಧೋನಿ ಬಾಂಗ್ಲಾದೇಶ ವಿರುದ್ಧ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲೇ ಶೂನ್ಯ ಸುತ್ತಿದ್ದ ಧೋನಿ, 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಗೆದ್ದುಕೊಡುವ ಮೂಲಕ ಭಾರತದ ಅವಿಭಾಜ್ಯ ಆಟಗಾರರಾಗಿ ರೂಪುಗೊಂಡರು.

click me!