2ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಸಾಧ್ಯತೆ!

By Web DeskFirst Published Jan 13, 2019, 2:34 PM IST
Highlights

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಮೊದಲ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಮಾಡಲಿರುವ ಬದಲಾವಣೆ ವಿವರ ಇಲ್ಲಿದೆ.

ಆಡಿಲೇಡ್(ಜ.13): ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ ಇದೀಗ 2ನೇ ಏಕದಿನ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದೆ. ದ್ವಿತೀಯ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿ ಸರಣಿ ಸಮಬಲ ಮಾಡಿಕೊಳ್ಳಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ. ಆದರೆ 2ನೇ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಫ್ಲಾಸ್ ಡ್ಯಾನ್ಸ್ ಕಲಿಯಲು ಮುಂದಾದ ರೋಹಿತ್ ಶರ್ಮಾ - ವೀಡಿಯೋ ವೈರಲ್!

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಒಂದು ಬದಲಾವಣೆ ಮಾಡಲು ನಾಯಕ ವಿರಾಟ್ ಕೊಹ್ಲಿ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿರುವ ಕೇದಾರ್ ಜಾದವ್ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. 

ಇದನ್ನೂ ಓದಿ: ಅಮಾನತಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್!

ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಬೀಸೋ ಕೇದಾರ್, ಪಾರ್ಟ್ ಟೈಮ್ ಬೌಲಿಂಗ್‌ನಲ್ಲೂ ಮಿಂಚಿದ್ದಾರೆ. ಹೀಗಾಗಿ ಕೇದಾರ್ ಜಾದವ್‌ಗೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಜಾದವ್‌ಗಾಗಿ ದಿನೇಶ್ ಕಾರ್ತಿಕ್ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಇದೆ. ಮೊದಲ ಪಂದ್ಯದಲ್ಲಿ ಕಾರ್ತಿಕ್ 12 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದರು. ಕೇದಾರ್ ತಂಡ ಸೇರಿಕೊಂಡರೆ ದಿನೇಶ್ ಕಾರ್ತಿಕ್ ದ್ವಿತೀಯ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಜನವರಿ 15 ರಂದು ಆಡಿಲೇಡ್‌ನಲ್ಲಿ ದ್ವಿತೀಯ ಏಕದಿನ ಪಂದ್ಯ ನಡೆಯಲಿದೆ.

click me!