ಇತಿಹಾಸ ಸೇರಲಿದೆಯಾ 5 ಪಂದ್ಯಗಳ ಏಕದಿನ ಸರಣಿ..? ಯಾಕೆ ಹೀಗೆ..?

By naveena -First Published Sep 20, 2017, 9:27 AM IST
Highlights

ಮುಂದಿನ ದಿನಗಳಲ್ಲಿ ಯಾವ ದೇಶವೂ ಮೂರಕ್ಕಿಂತ ಹೆಚ್ಚು ಪಂದ್ಯಗಳ ದ್ವಿಪಕ್ಷೀಯ ಸರಣಿ ಆಡುವುದಿಲ್ಲ. ಟಿ20ಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ.

ಮೆಲ್ಬನ್(ಸೆ.20): ಸದ್ಯ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಸರಣಿಯೇ ಬಹುಶಃ ಕೊನೆಯ 5 ಪಂದ್ಯಗಳ ಏಕದಿನ ಸರಣಿ ಆಗಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಜೇಮ್ಸ್ ಸುದರ್‌'ಲೆಂಡ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಯಾವ ದೇಶವೂ ಮೂರಕ್ಕಿಂತ ಹೆಚ್ಚು ಪಂದ್ಯಗಳ ದ್ವಿಪಕ್ಷೀಯ ಸರಣಿ ಆಡುವುದಿಲ್ಲ. ಟಿ20ಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ. ಸದ್ಯ ಪ್ರಸ್ತಾಪಿಸಿರುವ 13 ತಂಡಗಳ ಏಕದಿನ ಲೀಗ್ ಚಾಲ್ತಿಗೆ ಬಂದರೆ ಪ್ರತಿ ತಂಡ ತವರಿನಲ್ಲಿ 6 ಹಾಗೂ ತವರಿನಾಚೆ 6 ಏಕದಿನ ಪಂದ್ಯಗಳನ್ನು ಆಡಲಿದೆ.

ಏಕದಿನ ಕ್ರಿಕೆಟ್ ಇಷ್ಟಕ್ಕೇ ಸೀಮಿತಗೊಂಡರೆ ಅಚ್ಚರಿಯಿಲ್ಲ’ ಎಂದು ಅವರು ಹೇಳಿದ್ದಾರೆ.

click me!