ಇಂಡೋ-ಅಫ್ಘಾನ್ ಟೆಸ್ಟ್: ಮಳೆಯಿಂದಾಗಿ ದಿಢೀರ್ ವಿಕೆಟ್ ಕಳೆದುಕೊಂಡ ಭಾರತ

Published : Jun 14, 2018, 04:30 PM ISTUpdated : Jun 14, 2018, 04:35 PM IST
ಇಂಡೋ-ಅಫ್ಘಾನ್ ಟೆಸ್ಟ್: ಮಳೆಯಿಂದಾಗಿ ದಿಢೀರ್ ವಿಕೆಟ್ ಕಳೆದುಕೊಂಡ ಭಾರತ

ಸಾರಾಂಶ

ಕರ್ನಾಟಕದಾದ್ಯಂತ ಸುರಿಯುತ್ತಿರುವ ಮಳೆ ಭಾರತ ಹಾಗೂ ಅಫ್ಘಾನಿಸ್ತಾನ ಟೆಸ್ಟ್ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೂ ಅಡ್ಡಿ ಪಡಿಸಿದೆ. ಎರಡೆರಡು ಬಾರಿ ಸುರಿದ ಮಳೆಯಿಂದಾಗಿ ಭಾರತ ದಿಢೀರ್ 2 ವಿಕೆಟ್ ಕಳೆದುಕೊಂಡಿದೆ.

ಬೆಂಗಳೂರು(ಜೂನ್.14): ಭಾರತ ಹಾಗೂ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಭಾರತದ ಬ್ಯಾಟಿಂಗ್ ಜೊತೆಗೆ ಮಳೆರಾಯನ ಆರ್ಭಟವೂ ಹೆಚ್ಚಾಗಿದೆ. ಮಳೆಯಿಂದಾಗಿ ಭಾರತ ದಿಢೀರ್ 2 ವಿಕೆಟ್ ಕಳೆದುಕೊಂಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಧವನ್ 107 ರನ್ ಸಿಡಿಸಿದರೆ, ಮುರಳಿ ವಿಜಯ್ 105 ರನ್ ಬಾರಿಸಿ ಔಟಾದರು.

ಮುರಳಿ ವಿಜಯ್‌ಗೆ ಉತ್ತಮ  ಸಾಥ್ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅರ್ಧಶತ ಸಿಡಿಸಿ ಪೆವಿಲಿಯನ್ ಸೇರಿದರು. ರಾಹುಲ್ 54 ರನ್ ಸಿಡಿಸಿ ಯಮಿನ್ ಅಹಮ್ಮದ್ಜೈಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಯಮೀನ್ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದರು. ಸದ್ಯ ಚೇತೇಶ್ವರ್ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದಾರೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಫುಟ್ಬಾಲಿಗನ ಬಳಿ ಇದೆ ಬರೋಬ್ಬರಿ 91 ಕೋಟಿ ರೂಪಾಯಿ ಕಾರು ಕಲೆಕ್ಷನ್
WPL 2026: ಎಲ್ಲಾ ತಂಡಗಳ ನಾಯಕಿಯರ ಸಂಬಳ ಎಷ್ಟು? ಸ್ಮೃತಿ ಸಂಬಳ ಇಷ್ಟೊಂದಾ?