ಅಂಡರ್-19 ವಿಶ್ವಕಪ್'ಗೆ ಟೀಂ ಇಂಡಿಯಾ ಪ್ರಕಟ: ಪೃಥ್ವಿ ಶಾಗೆ ನಾಯಕ ಪಟ್ಟ

By Suvarna Web DeskFirst Published Dec 3, 2017, 9:00 PM IST
Highlights

2016ನೇ ಸಾಲಿನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್'ಇಂಡಿಸ್ ಎದುರು ಭಾರತ ಪರಾಭವಗೊಂಡಿತ್ತು.

ಮುಂಬೈ(ಡಿ.03): ಮುಂಬರುವ 2018ನೇ ಸಾಲಿನ ಅಂಡರ್-19 ವಿಶ್ವಕಪ್'ಗೆ 16 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಮುಂಬೈನ ಪ್ರತಿಭಾನ್ವಿತ ಕ್ರಿಕೆಟಿಗ ಪೃಥ್ವಿ ಶಾ ಅವರಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.

ಜನವರಿ 13ರಿಂದ ಫೆಬ್ರವರಿ 3ರವರೆಗೆ ನ್ಯೂಜಿಲೆಂಡ್'ನಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ ನಡೆಯಲಿದ್ದು, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಯುವ ಪಡೆ ಕಣಕ್ಕಿಳಿಯಲಿದೆ. ಅತಿಹೆಚ್ಚು ಬಾರಿ ವಿಶ್ವಕಪ್ ಗೆದ್ದ ತಂಡವೆಂದು ಆಸ್ಟ್ರೇಲಿಯಾದೊಂದಿಗೆ ಜಂಟಿ ಅಗ್ರಸ್ಥಾನ(3 ಬಾರಿ) ಕಾಯ್ದುಕೊಂಡಿರುವ ಭಾರತ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಲಿದೆ.

2016ನೇ ಸಾಲಿನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್'ಇಂಡಿಸ್ ಎದುರು ಭಾರತ ಪರಾಭವಗೊಂಡಿತ್ತು. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಡಿ.08ರಿಂದ 22ರವರೆಗೆ ಅಭ್ಯಾಸ ಶಿಬಿರದಲ್ಲಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಅಂಡರ್-19 ತಂಡ ಹೀಗಿದೆ:

ಪೃಥ್ವಿ ಶಾ(ನಾಯಕ), ಶುಭ್'ಮನ್ ಗಿಲ್(ಉಪ ನಾಯಕ), ಮನ್ಜೋತ್ ಕಲ್ರಾ, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಆರ್ಯನ್ ಜೋಯಲ್(ವಿಕೆಟ್ ಕೀಪರ್), ಹಾರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಶಿವಂ ಮಾವಿ, ಕಲ್ಮೇಶ್ ನಾಗರ್'ಕೋಟಿ, ಇಶಾನ್ ಪೋರೆಲ್, ಆರ್ಶ್'ದೀಪ್ ಸಿಂಗ್, ಅಂಕುಲ್ ರಾಯ್, ಶಿವಂ ಸಿಂಗ್, ಪಂಕಜ್ ಯಾದವ್.

 

click me!