ಇಂಟರ್‌ಕಾಂಟಿನೆಂಟಲ್ ಕಪ್: ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಕೀನ್ಯಾ ಎದುರಾಳಿ

First Published Jun 9, 2018, 1:41 PM IST
Highlights

ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವ ಸುನಿಲ್ ಚೆಟ್ರಿ ನಾಯಕತ್ವದ ಭಾರತ ಪ್ರಶಸ್ತಿಗಾಗಿ ಕಠಿಣ ಅಭ್ಯಾಸ ಶುರುಮಾಡಿದೆ. ಆದರೆ ಫೈನಲ್ ಪಂದ್ಯದಲ್ಲಿ ಭಾರತದ ಎದುರಾಳಿ ಯಾರು?

ಮುಂಬೈ(ಜೂನ್.9): ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ಪ್ರಶಸ್ತಿಗಾಗಿ ಕೀನ್ಯಾ ವಿರುದ್ಧ ಹೋರಾಟ ನಡೆಸಬೇಕಿದೆ. ಭಾನುವಾರ(ಜೂನ್.10) ನಡೆಯಲಿರುವ ಫೈನಲ್ ಪಂದ್ಯ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ.

ಲೀಗ್ ಪಂದ್ಯದ ಬಳಿಕ ಭಾರತ, ಕೀನ್ಯಾ ಹಾಗೂ ನ್ಯೂಜಿಲೆಂಡ್ ಸಮಾನವಾಗಿ ತಲಾ 6 ಅಂಕ ಪಡೆದಿತ್ತು. ಆದರೆ ಗೋಲುಗಳ ಅಂತರದ ಆಧಾರದಲ್ಲಿ ಭಾರತ ಹಾಗೂ ಕೀನ್ಯಾ ಫೈನಲ್ ಪ್ರವೇಶಿಸಿದ್ದರೆ, ನ್ಯೂಜಿಲೆಂಡ್ ತನ್ನ ಹೋರಾಟವನ್ನ ಅಂತ್ಯಗೊಳಿಸಿತು.

ಲೀಗ್ ಪಂದ್ಯದಲ್ಲಿ ಭಾರತ, ಕೀನ್ಯಾ ತಂಡವನ್ನ 3-0 ಅಂತರದಿಂದ ಮಣಿಸಿತ್ತು. ಇದೀಗ ಫೈನಲ್ ಪಂದ್ಯದಲ್ಲಿ ಮತ್ತೆ ಭಾರತ-ಕೀನ್ಯಾ ಮುಖಾಮುಖಿಯಾಗಿದೆ. ಸುನಿಲ್ ಚೆಟ್ರಿ ನಾಯಕತ್ವದ ಭಾರತ ಇಂಟರ್‌ಕಾಂಟಿನೆಂಟಲ್ ಕಪ್ ಪ್ರಶಸ್ತಿ ಗೆಲ್ಲೋ ವಿಶ್ವಾಸದಲ್ಲಿದ್ದರೆ, ಕೀನ್ಯಾ ಲೀಗ್ ಸೋಲಿಗೆ ತೀರುಗೇಟು ನೀಡಲು ಸಜ್ಜಾಗಿದೆ. ಹೀಗಾಗಿ ಫೈನಲ್ ಹಣಾಹಣಿ ರೋಚಕ ಘಟ್ಟ ತಲುಪೋದರಲ್ಲಿ ಯಾವುದೇ ಅನುಮಾನವಿಲ್ಲ.

click me!