ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.25]: 2019ರ ಫಿಬಾ ಮಹಿಳೆಯರ ಏಷ್ಯಾಕಪ್ ಬಾಸ್ಕೆಟ್‌ಬಾಲ್ ಟೂರ್ನಿ ಯಲ್ಲಿ ಆತಿಥೇಯ ಭಾರತ ಆಘಾತಕಾರಿ ಆರಂಭ ಪಡೆದುಕೊಂಡಿದೆ.
ಮಂಗಳವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್’ನಲ್ಲಿ 45ನೇ ಸ್ಥಾನದಲ್ಲಿರುವ ಭಾರತ, ವಿಶ್ವ ನಂ.10 ಜಪಾನ್ ವಿರುದ್ಧ 27-103 ಅಂಕಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿರುವ ಭಾರತ, ಸೆಮಿಫೈನಲ್‌ಗೆ ಪ್ರವೇಶ ಪಡೆಯಬೇಕಿದ್ದರೆ ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಬೇಕಿದೆ.
undefined
ಬೆಂಗಳೂರಲ್ಲಿ ಏಷ್ಯಾ ಬಾಸ್ಕೆಟ್‌ಬಾಲ್ ಟೂರ್ನಿಗೆ ಕ್ಷಣಗಣನೆ
ಪಂದ್ಯದ ಮೊದಲ ಕ್ವಾರ್ಟರ್‌ನಲ್ಲೇ ಜಪಾನ್ ಮೇಲುಗೈ ಸಾಧಿಸಿತು. 15-3ರ ಆರಂಭಿಕ ಮುನ್ನಡೆ ಪಡೆದ ಜಪಾನ್, ಮೊದಲ 10 ನಿಮಿಷಗಳ ಆಟದ ಬಳಿಕ 28-7ರ ಭರ್ಜರಿ ಮುನ್ನಡೆ ಪಡೆದು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ತಕ್ಕ ಮಟ್ಟಿಗಿನ ಪೈಪೋಟಿ ನೀಡಿದರೂ ಭಾರತ 11-22ರಿಂದ ಹಿನ್ನಡೆ ಕಂಡಿತು. ಮೊದಲಾರ್ಧದ ಮುಕ್ತಾಯಕ್ಕೆ ಜಪಾನ್ 50-18ರ ಭಾರೀ ಮುನ್ನಡೆ ಪಡೆಯಿತು.
ಟ್ರಾಫಿಕ್ ನಿಯಮ ಉಲ್ಲಂಘಿಸಿದ ಶೇನ್ ವಾರ್ನ್; 1.6 ಲಕ್ಷ ರೂ ದಂಡ, ಡ್ರೈವಿಂಗ್ ನಿಷೇಧ!
3ನೇ ಕ್ವಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಜಪಾನ್ 31 ಅಂಕ ಕಲೆಹಾಕಿದರೆ, ಭಾರತ ಗಳಿಸಿದ್ದು ಕೇವಲ 6 ಅಂಕ ಮಾತ್ರ. 4ನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ 22-3ರ ಮ್ನುನಡೆ ಪಡೆದ ಜಪಾನ್, 100 ಅಂಕಗಳ ಗಡಿ ದಾಟಿತು. ಜಪಾನ್ ಪರ ಸನಾಯೆ ಮೊಟೊಕಾವ 16, ಸಾಕಿ ಹಯಾಶಿ ಹಾಗೂ ಎವಿಲಿನ್ ಮವುಲಿ ತಲಾ 11 ಅಂಕ ಗಳಿಸಿದರು. ಭಾರತದ ಪರ ಶಿರೀನ್ ಲಿಮಾಯೆ 11 ಅಂಕಗಳಿಸಿದರು. ಉಳಿದ್ಯಾವ ಆಟಗಾರ್ತಿಯರಿಗೆ 4ಕ್ಕಿಂತ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿಲ್ಲ. ರಾಜ್ಯದ ಬಾಂಧವ್ಯ (02 ಅಂಕ), ನವನೀತ (00 ಅಂಕ), ಲೋಪಮುದ್ರಾ ತಿಮ್ಮಯ್ಯ (00) ನಿರಾಸೆ ಮೂಡಿಸಿದರು. ಬುಧವಾರ ನಡೆಯಲಿರುವ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಭಾರತ, ಕೊರಿಯಾ ವಿರುದ್ಧ ಸೆಣಸಲಿದೆ.