‘2036 ಒಲಿಂಪಿಕ್ಸ್, 2030ರ ಕಿರಿಯರ ಒಲಿಂಪಿಕ್ಸ್‌ಗಳಿಗೆ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿದೆ. ಅದಕ್ಕೂ ಮುನ್ನ ದೇಶದಲ್ಲಿ ವಿಶ್ವ ಅಥ್ಲೆಟಿಕ್ಸ್ ಕೂಟ ನಡೆದರೆ ಉತ್ತಮ ಅನುಭವ ದೊರೆಯಲಿದೆ’ ಎಂದು ಅಂಜು ಹೇಳಿದ್ದಾರೆ.
ನವದೆಹಲಿ(ಡಿ.04): 2029ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿದೆ. ಆತಿಥ್ಯ ಹಕ್ಕು ಪಡೆಯಲು ಬಿಡ್ ಸಲ್ಲಿಸಲು ಸಿದ್ಧತೆ ಆರಂಭಿಸಿರುವುದಾಗಿ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ತಿಳಿಸಿದೆ. ಈ ಮೊದಲು 2027ರ ವಿಶ್ವ ಅಥ್ಲೆಟಿಕ್ಸ್ ಕೂಟದ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿತ್ತು. ಆದರೆ ಇದೀಗ ತನ್ನ ಯೋಜನೆ ಬದಲಿಸಿರುವುದಾಗಿ ಎಎಫ್‌ಐನ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.
‘2036 ಒಲಿಂಪಿಕ್ಸ್, 2030ರ ಕಿರಿಯರ ಒಲಿಂಪಿಕ್ಸ್‌ಗಳಿಗೆ ಆತಿಥ್ಯ ವಹಿಸಲು ಭಾರತ ಆಸಕ್ತಿ ತೋರಿದೆ. ಅದಕ್ಕೂ ಮುನ್ನ ದೇಶದಲ್ಲಿ ವಿಶ್ವ ಅಥ್ಲೆಟಿಕ್ಸ್ ಕೂಟ ನಡೆದರೆ ಉತ್ತಮ ಅನುಭವ ದೊರೆಯಲಿದೆ’ ಎಂದು ಅಂಜು ಹೇಳಿದ್ದಾರೆ.
undefined
ಕ್ರೀಡಾ ಪ್ರಶಸ್ತಿ ವಿಜೇತರ ಆಯ್ಕೆ ಸಮಿತಿಗೆ ರಾಜ್ಯದ ಸುಮಾ, ಫರ್ಮಾನ್ ಬಾಷಾ
ನವದೆಹಲಿ: 2023ರ ಕ್ರೀಡಾ ಪ್ರಶಸ್ತಿ ವಿಜೇತರ ಆಯ್ಕೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಸಮಿತಿಯನ್ನು ರಚಿಸಿ ಕೇಂದ್ರ ಕ್ರೀಡಾ ಸಚಿವಾಲಯ ಆದೇಶ ಹೊರಡಿಸಿದೆ. 12 ಸದಸ್ಯರ ಸಮಿತಿಯಲ್ಲಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ. ಶೂಟಿಂಗ್ ಕೋಚ್ ಸುಮಾ ಶಿರೂರ್ ಹಾಗೂ ಪವರ್-ಲಿಫ್ಟಿಂಗ್ ಫೆಡರೇಶನ್‌ನ ಫರ್ಮಾನ್ ಬಾಷಾ ಸಮಿತಿಯಲ್ಲಿದ್ದಾರೆ. ದಿಗ್ಗಜ ಹಾಕಿ ಆಟಗಾರ ಧನರಾಜ್ ಪಿಳ್ಳೈ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಕೂಡಾ ಸ್ಥಾನ ಪಡೆದಿದ್ದಾರೆ.
Vijay Hazare Trophy: ಹರ್ಯಾಣ ಎದುರು ರಾಜ್ಯಕ್ಕೆ ಹೀನಾಯ ಸೋಲು
ಕಲಬುರಗಿ ಓಪನ್ ಟೆನಿಸ್: ರಾಮ್‌ಕುಮಾರ್‌ಗೆ ಪ್ರಶಸ್ತಿ
ಕಲಬುರಗಿ: ಭಾರತದ ತಾರಾ ಟೆನಿಸಿಗ ರಾಮ್‌ಕುಮಾರ್ ರಾಮನಾಥನ್ ವಾರದ ಅಂತರದಲ್ಲಿ 2ನೇ ಐಟಿಎಫ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 5ನೇ ಶ್ರೇಯಾಂಕಿತ ರಾಮ್ ಭಾನುವಾರ ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರಿಯಾದ ಡೇವಿಚ್ ಪಿಚ್ಲೆರ್ ವಿರುದ್ಧ 6-2, 6-1 ಅಂತರದಲ್ಲಿ ಜಯಭೇರಿ ಬಾರಿಸಿದರು. 7ನೇ ಶ್ರೇಯಾಂಕಿತ ಪಿಚ್ಲೆರ್ ವಿರುದ್ಧ ಆರಂಭದಿಂದಲೂ ಮೇಲುಗೈ ಸಾಧಿಸಿದ ರಾಮ್, ಕೊನೆವರೆಗೂ ಅತ್ಯುತ್ತಮ ಆಟ ಪ್ರದರ್ಶಿಸಿ ಪ್ರಶಸ್ತಿ ಗೆದ್ದರು. ಇದು 2 ತಿಂಗಳಲ್ಲಿ ರಾಮ್ ಗೆದ್ದ 3ನೇ ಐಟಿಎಫ್ ಪ್ರಶಸ್ತಿ. ಬಹುಮಾನದ ರೂಪದಲ್ಲಿ ರಾಮ್‌ಗೆ 3200 ಯುಎಸ್ ಡಾಲರ್(ಸುಮಾರು ₹2.6 ಲಕ್ಷ) ಲಭಿಸಿತು.
ಭಾರತೀಯ ಕ್ರಿಕೆಟಿಗರು ಎಲ್ಲೆಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದಾರೆ ನೋಡಿ!
ಒಲಿಂಪಿಕ್ಸ್ ಸಿದ್ಧತೆಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ನೀರಜ್ ಚೋಪ್ರಾ
ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಚಿತ್ತವಿರಿಸಿರುವ ಟೋಕಿಯೋ ಒಲಿಂಪಿಕ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ, ಬಹುನಿರೀಕ್ಷಿತ ಕ್ರೀಡಾಕೂಟದ ಸಿದ್ಧತೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದಾರೆ. ಅವರಿಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(ಟಾಪ್ಸ್) ಯೋಜನೆಯಡಿ ಫಾಚೆಫ್‌ಸ್ಟ್ರೂಮ್‌ನಲ್ಲಿ ಸಿದ್ಧತೆಗೆ ಅವಕಾಶ ಮಾಡಿಕೊಡಲಾಗಿದ್ದು, 27.67 ಲಕ್ಷ ರು. ಅನುದಾನ ಒದಗಿಸಲಾಗಿದೆ. ಅವರು ಡಿ.5ರಿಂದ 2024ರ ಫೆ.29ರ ವರೆಗೆ ದ.ಆಫ್ರಿಕಾದಲ್ಲೇ ತರಬೇತಿ ಪಡೆಯಲಿದ್ದು, ಬಳಿಕ ಯೂರೋಪ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.