
ಜೋಹಾನ್ಸ್'ಬರ್ಗ್(ಜ.26): ಮೂರನೇ ಟೆಸ್ಟ್ ರೋಚಕ ಘಟ್ಟ ತಲುಪುವ ಸಾಧ್ಯತೆಯಿದೆ. ಈಗಾಗಲೇ 2 ಪಂದ್ಯಗಳನ್ನು ಸೋತು ಸರಣಿ ಕೈಬಿಟ್ಟಿರುವ ವಿರಾಟ್ ಕೊಹ್ಲಿ ಪಡೆಗೆ ಅಂತಿಮ ಟೆಸ್ಟ್ ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಮೂರನೇ ದಿನದಾಟದಲ್ಲಿ 49/1 ರನ್'ನೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಹೆಚ್ಚು ರನ್ ಗಳಿಸದಿದ್ದರೂ ನಾಯಕ ಕೊಹ್ಲಿ (41),ರಹಾನೆ(48), ಭುವಿ(33), ಶಮಿ(27) ಹಾಗೂ ಮುರಳಿ ವಿಜಯ್(25) ಅವರ ಸಮಯೋಚಿತ ಆಟದಿಂದ 247 ರನ್ ಗಳಿಸಿ ಹರಿಣಿ ತಂಡಕ್ಕೆ 241 ರನ್ ಟಾರ್ಗೆಟ್ ನೀಡಿದೆ.
ಅತಿಥೇಯ ತಂಡದ ಪರ ಫಿಲೆಂಡರ್ 61/3,ರಬಡಾ 69/3, ಮಾರ್ಕಲ್ 47/3 ವಿಕೇಟ್'ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿದರು. ಸುಲಭ ಮೊತ್ತವನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಶಮಿ ಬೌಲಿಂಗ್'ನಲ್ಲಿ ಮಾರ್ಕಮ್ ಅವರ ವಿಕೇಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಸ್ಕೋರ್
ಭಾರತ 187 ಮತ್ತು 247
ದಕ್ಷಿಣ ಆಫ್ರಿಕಾ
194 ಹಾಗೂ 10/1
(ವಿವರ ಅಪೂರ್ಣ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.