ನಿಮ್ಮಿಂದ ದೇಶದ ಕ್ರೀಡಾ ಪರಾಕ್ರಮ ವಿಶ್ವವೇ ನೋಡಿದೆ: ಸಾನಿಯಾ ಮಿರ್ಜಾಗೆ ಪತ್ರ ಬರೆದು ಪ್ರಧಾನಿ ಮೋದಿ ಶ್ಲಾಘನೆ

By Kannadaprabha News  |  First Published Mar 12, 2023, 8:53 AM IST

ಎರಡು ದಶಕಗಳ ಟೆನಿಸ್ ಬದುಕಿಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ ಸಾಧನೆ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ನಿಮ್ಮ ಶ್ರೇಷ್ಠ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ  ಎಂದ ಪ್ರಧಾನಿ


ನವದೆಹಲಿ(ಮಾ.12): ಇತ್ತೀ​ಚೆ​ಗಷ್ಟೇ ಟೆನಿಸ್‌ ವೃತ್ತಿ ಬದು​ಕಿಗೆ ನಿವೃತ್ತಿ ಘೋಷಿ​ಸಿದ ಸಾನಿಯಾ ಮಿರ್ಜಾ​ಗೆ ಪ್ರಧಾನಿ ನರೇಂದ್ರ ಮೋದಿ ಅಭಿ​ನಂದನಾ ಪತ್ರ ಬರೆ​ದಿದ್ದು, ನಿಮ್ಮ ಶ್ರೇಷ್ಠ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ ಎಂದು ಕೊಂಡಾ​ಡಿ​ದ್ದಾರೆ.

‘ನೀವು ಆಡಲು ಆರಂಭಿಸಿದಾಗ ಭಾರತದ ಟೆನಿಸ್‌ ಕ್ಷೇತ್ರ ತುಂಬಾ ವಿಭಿನ್ನವಾಗಿತ್ತು. ನಿಮ್ಮ ಸಾಧನೆ ನೋಡಿ ಹೆಚ್ಚಿನ ಮಹಿಳೆಯರು ಟೆನಿಸ್‌ ಆಯ್ಕೆ ಮಾಡಿ ಅದರಲ್ಲಿ ಉತ್ತಮ ಸಾಧನೆ ಮಾಡಬಹುದು’ ಎಂದು ಶ್ಲಾಘಿ​ಸಿ​ದ್ದಾ​ರೆ. ‘ನಿಮ್ಮ ಯಶಸ್ಸು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಹಲವಾರು ಮಹಿಳೆಯರಿಗೆ ಸ್ಫೂರ್ತಿ ತುಂಬ​ಲಿದೆ. ಕ್ರೀಡೆಯ ಬಗ್ಗೆ ಹಿಂಜ​ರಿಕೆ ಇರು​ವ​ವ​ರಿಗೆ ಶಕ್ತಿ ನೀಡ​ಲಿ​ದೆ’ ಎಂದಿ​ದ್ದಾ​ರೆ. 

Tap to resize

Latest Videos

ಪ್ರಧಾ​ನಿಯ ಪತ್ರಕ್ಕೆ ಸಾನಿಯ ಪ್ರತಿ​ಕ್ರಿಯೆ ನೀಡಿದ್ದು, ನಿಮ್ಮ ಬೆಂಬಲ ಮತ್ತು ಸ್ಫೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು. ನಾನು ಯಾವತ್ತೂ ದೇಶ​ವನ್ನು ಪ್ರತಿ​ನಿ​ಧಿ​ಸಲು ಹೆಮ್ಮೆ ಪಡು​ತ್ತೇನೆ ಮತ್ತು ಭಾರತ ಹೆಮ್ಮೆ ಪಡುವ ಹಾಗೆ ಮಾಡಲು ನನ್ನಿಂದಾ​ಗುವ ಕೆಲಸ ಮುಂದು​ವ​ರಿ​ಸು​ತ್ತೇ​ನೆ​’ ಎಂದಿ​ದ್ದಾರೆ. ಕಳೆದ ತಿಂಗಳು ದುಬೈನಲ್ಲಿ ನಡೆದ ಟೆನಿಸ್‌ ಟೂರ್ನಿ ಮೂಲಕ ಸಾನಿಯಾ 22 ವರ್ಷ​ಗಳ ಕ್ರೀಡಾ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

I would like to thank you Honorable Prime Minister Ji for such kind and inspiring words .I have always taken great pride in representing our country to the best of my ability and will continue to do whatever I can to make India proud . Thank you for your support. pic.twitter.com/8q2kZ2LZEN

— Sania Mirza (@MirzaSania)

ಬೆಂಗ್ಳೂರು ಮಹಿಳಾ ಟೆನಿ​ಸ್‌: ಅಂಕಿತಾ ಸಿಂಗಲ್ಸ್‌ ಫೈನ​ಲ್‌​ಗೆ

ಬೆಂಗ​ಳೂ​ರು: ಭಾರ​ತದ ತಾರಾ ಟೆನಿ​ಸ್‌ ಆಟ​ಗಾರ್ತಿ ಅಂಕಿತಾ ರೈನಾ ಐಟಿಎಫ್‌ ಬೆಂಗಳೂರು ಮಹಿಳಾ ಟೆನಿಸ್‌ ಟೂರ್ನಿ​ಯಲ್ಲಿ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ನಗ​ರದ ಕೆಎ​ಸ್‌​ಎ​ಲ್‌​ಟಿಎ ಕ್ರೀಡಾಂಗ​ಣ​ದಲ್ಲಿ ನಡೆ​ಯು​ತ್ತಿ​ರುವ ಟೂರ್ನಿ​ಯಲ್ಲಿ ಶನಿ​ವಾರ ಮಹಿಳಾ ಸಿಂಗ​ಲ್ಸ್‌ ಸೆಮಿ​ಫೈ​ನ​ಲ್‌​ನಲ್ಲಿ 4ನೇ ಶ್ರೇಯಾಂಕಿತ ಅಂಕಿತಾ ಭಾರ​ತ​ದ​ವರೇ ಆದ, ಶ್ರೇಯಾಂಕ ರಹಿತ ಋುತುಜಾ ಭೋಸ್ಲೆ ವಿರುದ್ಧ 6-1, 6-1 ನೇರ ಸೆಟ್‌​ಗ​ಳಲ್ಲಿ ಗೆದ್ದು ಪ್ರಶಸ್ತಿ ಸುತ್ತಿ​ಗೇ​ರಿ​ದರು. 

ಮತ್ತೊಂದು ಸೆಮೀ​ಸ್‌​ನಲ್ಲಿ ಅಗ್ರ ಶ್ರೇಯಾಂಕಿತ ಚೆಕ್‌ ಗಣ​ರಾ​ಜ್ಯದ ಬ್ರೆಂಡಾ ಪ್ರುವಿ​ರ್‌​ಟೋವಾ ಸ್ಲೊವೇ​ನಿ​ಯಾದ ದಲಿಲಾ ಜಕು​ಪೊ​ವಿಚ್‌ ವಿರುದ್ಧ 7-6(7/2), 6-2 ಸೆಟ್‌​ಗ​ಳಿಂದ ಗೆದ್ದರು. ಭಾನು​ವಾರ ಫೈನ​ಲ್‌​ನಲ್ಲಿ ಅಂಕಿ​ತಾಗೆ ಪ್ರುವಿ​ರ್‌​ಟೋವಾ ಸವಾಲು ಎದು​ರಾ​ಗ​ಲಿದೆ.

"ಅನುಷ್ಕಾ ಭೇಟಿಯಾದಾಗ..": ತಮ್ಮ ಬದುಕಿಗೆ ತಿರುವು ಸಿಕ್ಕ ಕ್ಷಣವನ್ನು ಮೆಲುಕು ಹಾಕಿದ ವಿರಾಟ್ ಕೊಹ್ಲಿ..!

ಇದೇ ಡಬ​ಲ್ಸ್‌​ನ ಫೈನ​ಲ್‌​ನಲ್ಲಿ ಪೋರ್ಚು​ಗ​ಲ್‌ನ ಜಾರ್ಜ್‌ ಫ್ರಾನ್ಸಿಸ್ಕಾ ಹಾಗೂ ಜಾರ್ಜ್ ಮಾಟಿಲ್ಡೆ ಜೋಡಿ ಗ್ರೀಕ್‌ನ ವ್ಯಾಲೆಂಟಿನಿ ಹಾಗೂ ಬ್ರಿಟ​ನ್‌ನ ಈಡನ್‌ ಸಿಲ್ವಾ ವಿರುದ್ಧ 5-7, 6-0, 10-3 ಅಂತ​ರ​ದಲ್ಲಿ ಗೆದ್ದು ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಿ​ತು.

ಮೇ 21ಕ್ಕೆ ಬೆಂಗ್ಳೂರು 10ಕೆ ಮ್ಯಾರ​ಥಾ​ನ್‌

ಬೆಂಗ​ಳೂ​ರು: 15ನೇ ಆವೃ​ತ್ತಿಯ ಪ್ರತಿ​ಷ್ಠಿತ ಬೆಂಗ​ಳೂರು 10ಕೆ ಮ್ಯಾರ​ಥಾನ್‌ ಮೇ 21ರಂದು ನಡೆ​ಯ​ಲಿದೆ ಎಂದು ಆಯೋ​ಜ​ಕರು ಘೋಷಿ​ಸಿ​ದ್ದಾರೆ. ನಗರದ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ಆರಂಭ​ಗೊ​ಳ್ಳಲಿ​ರುವ ಮ್ಯಾರ​ಥಾ​ನ್‌​ನಲ್ಲಿ ದೇಶ ಹಾಗೂ ವಿದೇ​ಶದ ಹಲವು ಎಲೈಟ್‌ ಅಥ್ಲೀ​ಟ್‌​ಗಳು ಸೇರಿ ಸಾವಿ​ರಾರು ಮಂದಿ ಪಾಲ್ಗೊ​ಳ್ಳ​ಲಿ​ದ್ದಾರೆ. ಓಟದ ಸ್ಪರ್ಧೆ​ಯಲ್ಲಿ ಪಾಲ್ಗೊ​ಳ್ಳಲು ಮಾ.1ರಿಂದ ನೋಂದಣಿ ಆರಂಭ​ಗೊಂಡಿದ್ದು, ಏಪ್ರಿಲ್‌ 28ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದೆ ಎಂದು ಆಯೋ​ಜ​ಕರು ತಿಳಿ​ಸಿ​ದ್ದಾ​ರೆ.

click me!