
ಕೊಲ್ಕೊತ್ತ(ಸೆ.30): ಕಿವೀಸ್ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಆರಂಭಿಕ ಅಘಾತ ಅನುಭವಿಸಿದೆ.
ತವರಿನ 250 ಟೆಸ್ಟ್ ಆಡುತ್ತಿರುವ ಭಾರತದ ಪಂದ್ಯಕ್ಕೆ ಗಂಗೂಲಿ ಕನಸಿನಂತೆಯೇ ಕಪಿಲ್ ದೇವ್ ಗಂಟೆ ಭಾರಿಸುವ ಮೂಲಕ ಚಾಲನೆ ನೀಡಿದರು.ಲಾರ್ಡ್ಸ್ನಲ್ಲಿರುವಂತೆಯೇ ಇಲ್ಲಿಯೂ ಗಂಟೆ ಅಳವಡಿಸುವುದಾಗಿ ದಾದಾ ಈ ಹಿಂದೆಯೇ ತಿಳಿಸಿದ್ದರು.
ಅದರಂತೆತೆ ಇನ್ಮುಂದೆ ಟೆಸ್ಟ್ ಪಂದ್ಯಗಳಲ್ಲಿ ಗಂಟೆ ಸದ್ದು ಕೇಳಲಿದೆ. ಇನ್ನು 2ನೇ ಟೆಸ್ಟ್ನಲ್ಲಿ ಕೊಹ್ಲಿ ಸಾಕಷ್ಟು ಬದಲಾವಣೆಗಳುನ್ನು ಮಾಡಿದ್ದು, ಧವನ್ಗೆ ಅವಕಾಶ ಮಾಡಿಕೊಟ್ಟಿದರು. ಆದರೆ, ಮೊದಲಿಗರಾಗಿ ನಿರ್ಗಮಿಸಿ ಕೊಹ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾದರು.
ಇನ್ನು ಯಾದವ್ ಬದಲಿಗೆ ಭುವಿಗೆ ಸ್ಥಾನ ಕೊಡಲಾಗಿದೆ. 2 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರೋ ಗಂಭೀರ್ ಅಂತಿಮ 11ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸದ್ಯದ ವರದಿ ಬಂದಾಗ ಟೀಮ್ ಇಂಡಿಯಾ 57 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ. ಚೆತೇಶ್ವರ ಪೂಜಾರ(31) ಮತ್ತು ಅಜಿಂಕ್ಯ ರಹಾನೆ (2) ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.