ದುಲೀಪ್‌ ಟ್ರೋಫಿ: ಮುಂದುವರಿದ ಬ್ಲೂ ಪ್ರಾಬಲ್ಯ

Published : Sep 13, 2016, 04:33 PM ISTUpdated : Apr 11, 2018, 01:01 PM IST
ದುಲೀಪ್‌ ಟ್ರೋಫಿ: ಮುಂದುವರಿದ ಬ್ಲೂ ಪ್ರಾಬಲ್ಯ

ಸಾರಾಂಶ

ಗ್ರೇಟರ್‌ ನೋಯ್ಡಾ(ಸೆ.13): ಈಗಾಗಲೇ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿರುವ ಗೌತಮ್‌ ಗಂಭೀರ್‌ ಸಾರಥ್ಯದ ಇಂಡಿಯಾ ಬ್ಲೂ ತಂಡ, ಯುವರಾಜ್‌ ಸಿಂಗ್‌ ನಾಯಕತ್ವದ ಇಂಡಿಯಾ ರೆಡ್‌ ವಿರುದ್ಧ ಪ್ರಭುತ್ವ ಮೆರೆದಿದೆ.

ಇಲ್ಲಿನ ಗ್ರೇಟರ್‌ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯದ ನಾಲ್ಕನೇ ದಿನದಾಟದ ಬಹುಪಾಲು ಮಳೆಯಿಂದಾಗಿ ಗಲಿಬಿಲಿಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಳೆದುಕೊಂಡು 693 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಇಂಡಿಯಾ ಬ್ಲೂ, ಆನಂತರ ಯುವಿ ಪಡೆಯನ್ನು 356 ರನ್‌ಗಳಿಗೆ ಕಟ್ಟಿಹಾಕಿ ಮೂರನೇ ದಿನದಾಟದ ಅಂತ್ಯಕ್ಕೆ 2 ಓವರ್‌ಗಳಲ್ಲಿ 1 ರನ್‌ ಗಳಿಸಿತ್ತು.

ಮಂಗಳವಾರ ಮಳೆ ನಿಂತ ಮೇಲೆ ಆಟ ಮುಂದುವರೆಸಿದ ಮಯಾಂಕ್‌ ಅಗರ್ವಾಲ್‌ (39) ಮತ್ತು ಗೌತಮ್‌ ಗಂಭೀರ್‌ (36) ಮೊದಲ ವಿಕೆಟ್‌ಗೆ 67 ರನ್‌ ಕಲೆಹಾಕಿದರು. ಇನ್ನಿಂಗ್ಸ್‌ನ 18ನೇ ಓವರ್‌ನ ಎರಡನೇ ಎಸೆತದಲ್ಲಿ ಗಂಭೀರ್‌ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಕುಲದೀಪ್‌ ಯಾದವ್‌ ಯಶ ಕಂಡರು. ದಿನದಾಟದ 9 ಓವರ್‌ಗಳು ಬಾಕಿ ಇದ್ದಾಗ ಇಂಡಿಯಾ ಬ್ಲೂ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 26 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್‌ ಗಳಿಸಿ 426 ರನ್‌ ಮುನ್ನಡೆ ಸಾಧಿಸಿತ್ತು. ಮಯಾಂಕ್‌ 40 ಮತ್ತು ರೋಹಿತ್‌ ಶರ್ಮಾ 3 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರ್‌

ಇಂಡಿಯಾ ಬ್ಲೂ ಮೊದಲ ಇನ್ನಿಂಗ್ಸ್‌: 693/7 ಡಿಕ್ಲೇರ್‌

ಇಂಡಿಯಾ ರೆಡ್‌ ಮೊದಲ ಇನ್ನಿಂಗ್ಸ್‌: 356

ಇಂಡಿಯಾ ಬ್ಲೂ ಎರಡನೇ ಇನ್ನಿಂಗ್ಸ್‌

26 ಓವರ್‌ಗಳಲ್ಲಿ 1 ವಿಕೆಟ್‌ಗೆ 89

(ಮಯಾಂಕ್‌ ಬ್ಯಾಟಿಂಗ್‌ 40, ಗಂಭೀರ್‌ 36, ರೋಹಿತ್‌ ಶರ್ಮಾ 3 ಬ್ಯಾಟಿಂಗ್‌)

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಆತ ಊಟಿಗೆ ಕರೆದುಕೊಂಡು ಹೋಗಿ..': ಅಪ್ರಾಪ್ತೆ ಮೇಲೆ ಆರ್‌ಸಿಬಿ ಆಟಗಾರ ಲೈಂಗಿಕ ದೌರ್ಜನ್ಯ, ಬೇಲ್ ಕ್ಯಾನ್ಸಲ್! ಶುರುವಾಯ್ತು ಬಂಧನ ಭೀತಿ
ವಿಜಯ್ ಹಜಾರೆ ಟ್ರೋಫಿ: ದೇಶಿ ಕ್ರಿಕೆಟಲ್ಲಿ ರನ್‌ ಮಳೆ, ದಾಖಲೆಗಳ ಪ್ರವಾಸ; ಮೊದಲ ದಿನವೇ 22 ಶತಕ ದಾಖಲು!