
ನವದೆಹಲಿ(ಸೆ.13): ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲೊಬ್ಬರೆಂಬ ಹಿರಿಮೆ ಗಳಿಸಿರುವ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
ಇದೇ ತಿಂಗಳ 22ರಿಂದ ಆರಂಭಗೊಳ್ಳಲಿರುವ ಭಾರತ ತಂಡದ ವಿರುದ್ಧದ ಟೆಸ್ಟ್ ಸರಣಿಗಾಗಿ ಇಲ್ಲಿಗೆ ಆಗಮಿಸಿರುವ ಅವರು, ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘‘ವಿರಾಟ್ ಒಬ್ಬ ಶ್ರೇಷ್ಠ ಆಟಗಾರ. ಕ್ರಿಕೆಟ್ನ ಮೂರೂ ಮಾದರಿಗಳಲ್ಲಿ ಅವರು ತೋರುವ ಪ್ರದರ್ಶನ ವಿಶೇಷ ಹಾಗೂ ಶ್ಲಾಘನೀಯ. ಅವರ ಆಟವನ್ನು ನೋಡುವುದೆಂದರೆ ನನಗೆ ಆನಂದ. ಅವರಾಡುವ ಸಂದರ್ಭವನ್ನು ವೀಕ್ಷಿಸುವ ಪ್ರತಿ ಸಂದರ್ಭದಲ್ಲಿಯೂ ಕೆಲವಾರು ತಂತ್ರಗಾರಿಕೆಗಳನ್ನು ಕಲಿಯುತ್ತಿರುತ್ತೇನೆ’’ ಎಂದರು.
ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಕ್ರಿಕೆಟಿಗರ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಜೋ ರೂಟ್, ಸ್ಟೀವ್ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್ ಸ್ಥಾನ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೇನ್, ‘‘ನಾವು ನಾಲ್ವರು ಅಗ್ರ ಬ್ಯಾಟ್ಸ್ಮನ್ಗಳೆಂಬ ಹಿರಿಮೆ ಗಳಿಸಿದ್ದರೂ, ಆಡುವ ಶೈಲಿ, ಅನುಸರಿಸುವ ತಂತ್ರಗಾರಿಕೆ ಮಾತ್ರ ಪರಸ್ಪರ ಭಿನ್ನ. ನಮಗೆ ನಮ್ಮದೇ ಆದ ಪ್ರತ್ಯೇಕ ಗೇಮ್ ಪ್ಲಾನ್ಗಳಿವೆ’’ ಎಂದರು.
ಇದೇ ವೇಳೆ, ತಾನು ಉತ್ತಮ ಫಾರ್ಮ್ನಲ್ಲಿರುವುದಾಗಿ ತಿಳಿಸಿದ ವಿಲಿಯಮ್ಸನ್, ನ್ಯೂಜಿಲೆಂಡ್ ತಂಡದ ನಾಯಕನಾಗಿದ್ದರೂ ಬ್ಯಾಟಿಂಗ್ ಕಾಯಕವನ್ನು ಸಂತುಷ್ಟದಿಂದ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.