
ಮುಂಬೈ(ಡಿ.12): ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್'ನಲ್ಲಿ ಭಾರತ ಇನ್ನಿಂಗ್ಸ್ ಜಯ ದಾಖಲಿಸುವ ಮೂಲಕ ಐದು ಟೆಸ್ಟ್'ಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಸರಣಿ ಗೆಲುವಿನ ಮೂಲಕ ಸತತ ಐದು ಟೆಸ್ಟ್ ಸರಣಿ ಗೆದ್ದ ದಾಖಲೆ ಬರೆಯಿತು.
ನಾಲ್ಕನೇ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 182 ರನ್ಗಳಿಸಿದ್ದ ಇಂಗ್ಲೆಂಡ್ ಐದನೇ ದಿನವಾದ ಇಂದು ಅಶ್ವಿನ್ ಅಬ್ಬರಕ್ಕೆ ತತ್ತರಿಸಿತ್ತು. ಆರಂಭದಲ್ಲೇ ನಾಲ್ಕು ವಿಕೆಟ್ ತೆಗೆಯುವ ಮೂಲಕ ಅಶ್ವಿನ್ ಇಂಗ್ಲೆಂಡ್ ಸರಣಿ ಸೋಲಿಗೆ ಕಾರಣರಾದರು. ಅಶ್ವಿನ್ ಆರು ವಿಕೆಟ್ ಪಡೆದು ಮಿಂಚಿದ್ರು.
ಇಂಗ್ಲೆಂಡ್ 195 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 36 ರನ್ಗಳಿಂದ ಪಂದ್ಯ ಕೈ ಚೆಲ್ಲಿತು. ಐದು ಟೆಸ್ಟ್'ಗಳ ಸರಣಿಯಲ್ಲಿ ಮೂರು ಪಂದ್ಯ ಗೆಲ್ಲುವ ಮೂಲಕ ಭಾರತ ಸರಣಿ ತನ್ನದಾಗಿಸಿಕೊಂಡಿದೆ. ಸರಣಿ ಗೆದ್ದ ಖುಷಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಮೈದಾನದ ತುಂಬಾ ಒಂದು ಸುತ್ತು ಹಾಕುವ ಮೂಲಕ, ಐದು ದಿನಗಳಿಂದ ಉಭಯ ತಂಡಗಳನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರಿಗೂ ಧನ್ಯವಾದ ತಿಳಿಸಿ ಸಂತಸದ ಕ್ಷಣದಲ್ಲಿ ತೇಲಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.