
ವಾಂಗೇರಿ(ಡಿ.03): ಕರ್ನಾಟಕದ ಭರವಸೆಯ ಸ್ಪಿನ್ನರ್ ಕೆ.ಗೌತಮ್ ಸ್ಪಿನ್ ಮೋಡಿಯ ನೆರವಿನಿಂದ ಭಾರತ ‘ಎ’ ಇಲ್ಲಿ ನಡೆಯುತ್ತಿರುವ 3ನೇ ಅನಧಿಕೃತ ಟೆಸ್ಟ್ 3ನೇ ದಿನವಾದ ಭಾನುವಾರ ನ್ಯೂಜಿಲೆಂ ‘ಎ’ ತಂಡವನ್ನು ಮೊದಲ ಇನ್ನಿಂಗ್ಸನಲ್ಲಿ 398 ರನ್ ಗಳಿಗೆ ಆಲೌಟ್ ಆಗಿದ್ದು ಪಂದ್ಯ ಡ್ರಾನತ್ತ ಸಾಗಿದೆ.
4 ದಿನಗಳ ಪಂದ್ಯ ಇದಾಗಿದ್ದು ಭಾನುವಾರ 121 ರಗಳಿಂದ ಆಟ ಆರಂಭಿಸಿದ ಕಿವೀ ಪಡೆ ಮೊದಲ ಇನ್ನಿಂಗ್ಸನಲ್ಲಿ ಕ್ಯಾಮೆರಾ ಫ್ಲೆಚರ್(103) ಶತಕ ಹಾಗೂ ಬ್ರೇಸ್’ವೆಲ್(55) ಮತ್ತು ಜೆಮೀಸನ್(53)ರ ಅರ್ಧ ಶತಕದ ನೆರವಿನಿಂದ 75 ರನ್’ಗಳ ಮುನ್ನಡೆ ಸಾಧಿಸಿತು.
ಭಾರತ ‘ಎ’ ಪರ ಕೆ. ಗೌತಮ್ 139 ರಗಳಿಗೆ 6 ವಿಕೆಟ್ ಪಡೆದರು. ಗೌತಮ್ ಸ್ಪಿನ್ ಮೋಡಿಗೆ ಕಿವೀಸ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಪರೇಡ್ ನಡೆಸಿದರು. ಸಿರಾಜ್ 2, ನವದೀಪ್, ರಜನೀಶ್ ತಲಾ 1 ವಿಕೆಟ್ ಕಬಳಿಸಿದರು. 2ನೇ ಇನ್ನಿಂಗ್ಸ ಆರಂಭಿಸಿರುವ ಭಾರತ ‘ಎ’, ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದ್ದು 37 ರನ್’ಗಳಿಂದ
ಹಿನ್ನಡೆಯಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.