
ಹೈದರಾಬಾದ್(ಫೆ. 06): ಬಾಂಗ್ಲಾದೇಶ ವಿರುದ್ಧದ ಅಭ್ಯಾಸದ ಪಂದ್ಯವೊಂದರಲ್ಲಿ ಭಾರತೀಯ ಎ ತಂಡದ ಬ್ಯಾಟುಗಾರರು ರನ್ ಸುರಿಮಳೆ ಹರಿಸಿದ್ದಾರೆ. ಇಂದು ಮುಕ್ತಾಯಗೊಂಡ ಎರಡು ದಿನಗಳ ಅಭ್ಯಾಸದ ಪಂದ್ಯದಲ್ಲಿ ಬಾಂಗ್ಲಾದೇಶದ 224 ರನ್'ಗೆ ಪ್ರತಿಯಾಗಿ ಭಾರತ ಎ ತಂಡ ಕೇವಲ 90 ಓವರ್'ನಲ್ಲಿ 8 ವಿಕೆಟ್ ನಷ್ಟಕ್ಕೆ 461 ರನ್ ಕಲೆಹಾಕಿತು. ಬಾಂಗ್ಲಾದೇಶ ತನ್ನ ಎರಡನೇ ಇನ್ನಿಂಗ್ಸಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸುವುದರೊಂದಿಗೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ಈ ಎರಡು ದಿನಗಳ ಪಂದ್ಯದ ಹೈಲೈಟ್ ಆಗಿದ್ದು ಭಾರತೀಯ ತಂಡದ ಬ್ಯಾಟಿಂಗ್. ರಣಜಿ ಕ್ರಿಕೆಟ್'ನಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿದ್ದ ಗುಜತಾರ್'ನ ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್ ಮತ್ತು ತಮಿಳುನಾಡಿನ ವಿಜಯ್ ಶಂಕರ್ ಆಕರ್ಷಕ ಶತಕ ಭಾರಿಸಿದರು. ಅಯ್ಯರ್ 91 ಎಸೆತದಲ್ಲಿ ಶತಕ ಚಚ್ಚಿದರೆ, ವಿಜಯ್ ಶಂಕರ್ ಕೇವಲ 81 ಬಾಲ್'ನಲ್ಲಿ 103 ರನ್ ಭಾರಿಸಿದರು.
ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡವು ಫೆ.9-13ರವರೆಗೆ ಭಾರತ ವಿರುದ್ಧ ಇದೇ ಮೈದಾನದಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಲಿದೆ.
ಬಾಂಗ್ಲಾದೇಶ 67 ಓವರ್ 224/8(ಡಿಕ್ಲೇರ್)
(ಮುಷ್ಫಿಕುರ್ ರಹೀಮ್ 58, ಸೌಮ್ಯ ಸರ್ಕಾರ್ 52, ಸಬ್ಬೀರ್ ರಹಮಾನ್ 33, ಮಹಮದುಲ್ಲಾ 23, ಲಿಟನ್ ದಾಸ್ 23 ರನ್ - ಅನಿಕೇತ್ ಚೌಧರಿ 26/4)
ಭಾರತ ಎ 90 ಓವರ್ 461/8(ಡಿಕ್ಲೇರ್)
(ಪ್ರಿಯಾಂಕ್ ಪಾಂಚಾಲ್ 103, ವಿಜಯ್ ಶಂಕರ್ ಅಜೇಯ 103, ಶ್ರೇಯಸ್ ಅಯ್ಯರ್ 100, ನಿತಿನ್ ಸೈನಿ 66 ರನ್ - ಸುಭಾಶಿಸ್ ರಾಯ್ 57/3, ತೈಜುಲ್ ಇಸ್ಲಾಮ್ 141/3)
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 15 ಓವರ್ 73/2
(ತಮೀಮ್ ಇಕ್ಬಾಲ್ ಅಜೇಯ 42, ಸೌಮ್ಯ ಸರ್ಕಾರ್ 25 ರನ್ - ಕುಲ್ದೀಪ್ ಯಾದವ್ 2/2)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.