ಇಂಡೋ-ವಿಂಡೀಸ್ ಟೆಸ್ಟ್: ಶತಕದ ಹಾದಿಯಲ್ಲಿ ಮುಗ್ಗರಿಸಿದ ಪೂಜಾರ

By Naveen KodaseFirst Published Oct 4, 2018, 1:53 PM IST
Highlights

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್’ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ಆರಂಭದಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಜತೆಯಾದ ಯುವ ಪ್ರತಿಭೆ ಪೃಥ್ವಿ ಶಾ-ಚೇತೇಶ್ವರ್ ಪೂಜಾರ ಜೋಡಿ ಎರಡನೇ ವಿಕೆಟ್’ಗೆ 206ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 

ರಾಜ್’ಕೋಟ್[ಅ.04]: ವೃತ್ತಿಜೀವನದ 19ನೇ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಚೇತೇಶ್ವರ್ ಪೂಜಾರ 86 ರನ್ ಬಾರಿಸಿ ಶೆರ್ಮಾನ್ ಲೆವಿಸ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇದು ಲೆವಿಸ್ ಅವರ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್’ನ ಚೊಚ್ಚಲ ವಿಕೆಟ್ ಆಗಿದೆ.

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್’ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ಆರಂಭದಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಜತೆಯಾದ ಯುವ ಪ್ರತಿಭೆ ಪೃಥ್ವಿ ಶಾ-ಚೇತೇಶ್ವರ್ ಪೂಜಾರ ಜೋಡಿ ಎರಡನೇ ವಿಕೆಟ್’ಗೆ 206ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇದು ತವರಿನಲ್ಲಿ ಎರಡನೇ ವಿಕೆಟ್’ಗೆ ವೆಸ್ಟ್ ಇಂಡೀಸ್ ಎದುರು ಭಾರತೀಯ ಬ್ಯಾಟ್ಸ್’ಮನ್’ಗಳು ಬಾರಿಸಿದ ಗರಿಷ್ಠ ರನ್’ಗಳ ಜತೆಯಾಟವಾಗಿದೆ. 

42.6: WICKET! C Pujara (86) is out, c Shane Dowrich b Sherman Lewis, 209/2 https://t.co/RfrOR84i2v

— BCCI (@BCCI)

ಇಂದು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಭರ್ಜರಿ ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡರೆ, ವಿಂಡೀಸ್ ಪರ ಪದಾರ್ಪಣೆ ಮಾಡಿದ ಲೆವಿಸ್ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಅವರ ವಿಕೆಟ್ ಕಬಳಿಸುವ ಮೂಲಕ ವೃತ್ತಿ ಜೀವನದಲ್ಲಿ ಉತ್ತಮ ಆರಂಭ ಪಡೆದಿದ್ದಾರೆ.  
 

click me!