ಇಂಡೋ-ವಿಂಡೀಸ್ ಟೆಸ್ಟ್: ಅಲ್ಪಮೊತ್ತಕ್ಕೆ ಕುಸಿದ ಕೆರಿಬಿಯನ್ನರು

Published : Oct 06, 2018, 11:03 AM ISTUpdated : Oct 06, 2018, 11:20 AM IST
ಇಂಡೋ-ವಿಂಡೀಸ್ ಟೆಸ್ಟ್: ಅಲ್ಪಮೊತ್ತಕ್ಕೆ ಕುಸಿದ ಕೆರಿಬಿಯನ್ನರು

ಸಾರಾಂಶ

ಭಾರತ-ವೆಸ್ಟ್ ಇಂಡೀಸ್ ನಡುವೆ ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆರಿಬಿಯನ್ ಪಡೆ 181 ರನ್’ಗಳಿಗೆ ಸರ್ವಪತನ ಕಂಡು ಫಾಲೋ ಆನ್’ಗೆ ಒಳಗಾಗುವ, ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಭಾರತ ಪರ ಮಿಂಚಿನ ಪ್ರದರ್ಶನ ತೋರಿದ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು. ಇದೀಗ ವೆಸ್ಟ್ ವೆಸ್ಟ್ ಇಂಡೀಸ್ ಸರಣಿ ಸೋಲಿನತ್ತ ಮುಖ ಮಾಡಿದೆ. 

ರಾಜ್’ಕೋಟ್[ಅ.06]: ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್ ಚೇಸ್[53] ಹಾಗೂ ಕೀಮೋ ಪೌಲ್[47] ಬ್ಯಾಟಿಂಗ್ ಹೊರತಾಗಿಯೂ ಟೀಂ ಇಂಡಿಯಾದ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಕೇವಲ ರನ್’ಗಳಿಗೆ ಸರ್ವಪತನ ಕಾಣುವುದರೊಂದಿಗೆ 181 ರನ್’ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್’ನಲ್ಲಿ  468 ರನ್’ಗಳ ಹಿನ್ನಡೆ ಅನುಭವಿಸಿದೆ. ಇದೀಗ ವಿರಾಟ್ ಪಡೆ ವೆಸ್ಟ್ ಇಂಡೀಸ್ ಮೇಲೆ ಫಾಲೋ ಆನ್ ಹೇರಿದೆ.

ಮೊದಲ ದಿನವೇ ಕೇವಲ 94 ರನ್’ಗಳಿಗೆ ಅಗ್ರ ಕ್ರಮಾಂಕದ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ರೋಸ್ಟನ್ ಚೇಸ್ ಹಾಗೂ ಕೀಮೋ ಪೌಲ್ ಆಸರೆಯಾದರು. ಚೇಸ್ ಅರ್ಧಶತಕ ಸಿಡಿಸಿದರೆ, ಕೀಮೋ ಕೇವಲ ಮೂರು ರನ್’ಗಳಿಂದ ಅರ್ಧಶತಕ ವಂಚಿತರಾದರು. ಈ ಜೋಡಿ 7ನೇ ವಿಕೆಟ್’ಗೆ 73 ರನ್ ಕಲೆಹಾಕುವುದರೊಂದಗೆ ತಂಡದ ಮೊತ್ತವನ್ನು 150ರ ಸಮೀಪ ಕೊಂಡ್ಯೊಯ್ದಿತು. ಈ ಜೋಡಿಯನ್ನು ಉಮೇಶ್ ಯಾದವ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪೌಲ್ ಪೂಜಾರಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಚೇಸ್ ಅವರನ್ನು ಬಲಿ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು. 

ಭಾರತ ಪರ ಅಶ್ವಿನ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಮೊಹಮ್ಮದ್ ಶಮಿ 2 ಹಾಗೂ ಕುಲ್ದೀಪ್, ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ: 649/9
ವಿರಾಟ್ ಕೊಹ್ಲಿ: 139
ದೇವೇಂದ್ರ ಬಿಶೂ: 217/4

ವೆಸ್ಟ್ ಇಂಡೀಸ್: 181/10
ರೋಸ್ಟನ್ ಚೇಸ್: 53
ಅಶ್ವಿನ್: 37/4
[* ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ]

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?