
ಮುಂಬೈ(ಅ.18): ಭಾರತ-ವೆಸ್ಟ್ ಇಂಡೀಸ್ 4ನೇ ಏಕದಿನ ಪಂದ್ಯದ ಆತಿಥ್ಯ ಕಳೆದುಕೊಂಡು ಮುಖಭಂಗ ಅನುಭವಿಸಿದ್ದ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಗೆ ಕಾನೂನು ಹೋರಾಟದಲ್ಲೂ ಹಿನ್ನಡೆಯಾಗಿದೆ.
ಪಂದ್ಯವನ್ನು ವಾಂಖೇಡೆಯಿಂದ ಬ್ರೇಬೊರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಿದ್ದನ್ನು ಪ್ರಶ್ನಿಸಿ ಎಂಸಿಎ, ಬುಧವಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಪಂದ್ಯದ ಟಿಕೆಟ್ ಮಾರಟಕ್ಕೆ ತಡೆ ನೀಡಬೇಕು ಎಂದು ಎಂಸಿಎ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
‘ಆತಿಥ್ಯ ಹಕ್ಕು ಪತ್ರಕ್ಕೆ ಆಡಳಿತಗಾರರು ಸಹಿ ಹಾಕಬೇಕಿದೆ. ಆದರೆ ಸದ್ಯ ನಮ್ಮಲ್ಲಿ ಆಡಳಿತಗಾರರಿಲ್ಲ. ಸಣ್ಣ ಕಾರಣಕ್ಕೆ ಪಂದ್ಯವನ್ನು ಬಿಸಿಸಿಐ ಸ್ಥಳಾಂತರಗೊಳಿಸಿದೆ’ ಎಂದು ಎಂಸಿಎ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದರು. ಇದನ್ನು ಒಪ್ಪದ ನ್ಯಾಯಾಲಯ ಅರ್ಜಿ ತಿರಸ್ಕರಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.