ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಆ ಒಂದು ಓವರ್ ಮತ್ತೊಮ್ಮೆ ಕಣ್ತುಂಬಿಕೊಳ್ಳಿ

By Web DeskFirst Published Oct 25, 2018, 3:41 PM IST
Highlights

ಅಂತಿಮ ಓವರ್’ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 14 ರನ್’ಗಳ ಅವಶ್ಯಕತೆಯಿದ್ದವು. ಆದರೆ ಉಮೇಶ್ ಯಾದವ್ ಕೇವಲ 13 ರನ್’ಗಳನ್ನು ನೀಡುವ ಮೂಲಕ ಪಂದ್ಯ ರೋಚಕ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. 

ಬೆಂಗಳೂರು[ಅ.25]: ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ರೋಚಕ ಟೈನೊಂದಿಗೆ ಅಂತ್ಯ ಕಂಡಿದೆ. ಕೊನೆಯ ಕ್ಷಣದವರೆಗೂ ಫಲಿತಾಂಶ ತೂಗುಯ್ಯಾಲೆಯಂತಾಗಿದ್ದ ಪಂದ್ಯ ಕೊನೆಯ ಎಸೆತದಲ್ಲೂ ಫಲಿತಾಂಶ ಹೊರಬೀಳಲಿಲ್ಲ.

ಅಂತಿಮ ಓವರ್’ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 14 ರನ್’ಗಳ ಅವಶ್ಯಕತೆಯಿದ್ದವು. ಆದರೆ ಉಮೇಶ್ ಯಾದವ್ ಕೇವಲ 13 ರನ್’ಗಳನ್ನು ನೀಡುವ ಮೂಲಕ ಪಂದ್ಯ ರೋಚಕ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಕೊನೆಯ ಎಸೆತದಲ್ಲಿ ವಿಂಡೀಸ್ ಗೆಲ್ಲಲು 5 ರನ್’ಗಳ ಅವಶ್ಯಕತೆಯಿತ್ತು. ಶೈ ಹೋಪ್ ಬೌಂಡರಿ ಬಾರಿಸಿದರು. ಒಂದುವೇಳೆ ಅಂಬಟಿ ರಾಯುಡು ಆ ಬೌಂಡರಿ ತಡೆದಿದ್ದರೆ, ಟೀಂ ಇಂಡಿಯಾ ಗೆಲುವಿನ ನಗೆ ಬೀರುತ್ತಿತ್ತು.

ಈ ಲಿಂಕ್ ಕ್ಲಿಕ್ ಮಾಡಿ: ಹೀಗಿತ್ತು ಎಲ್ಲರೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಆ ಕೊನೆಯ ಓವರ್

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿಯ ಅಜೇಯ 157 ರನ್’ಗಳ ನೆರವಿನಿಂದ 321 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಶೈ ಹೋಪ್ ಅಜೇಯ 123 ರನ್’ಗಳ ನೆರವಿನಿಂದ 321 ರನ್ ಗಳಿಸಿತು.

click me!