ಟೀಂ ಇಂಡಿಯಾ ಮೇಲೆ ಬಿಡಿಹಿಡಿತ ಸಾಧಿಸಿದ ಆಂಗ್ಲರು

By Web DeskFirst Published 10, Sep 2018, 5:58 PM IST
Highlights

ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಕುಕ್-ರೂಟ್ ಜೋಡಿ ಮೂರನೇ ವಿಕೆಟ್’ಗೆ ಮುರಿಯದ 181 ರನ್’ಗಳ ಜತೆಯಾಟದಲ್ಲಿ ಪಾಲ್ಗೊಂಡರು.

ಓವಲ್[ಸೆ.10]: ಆಲಿಸ್ಟರ್ ಕುಕ್ ಅಜೇಯ ಶತಕ ಹಾಗೂ ನಾಯಕ ಜೋ ರೂಟ್ ಅಮೋಘ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 243 ರನ್ ಬಾರಿಸಿದ್ದು, ಒಟ್ಟಾರೆ 283 ರನ್’ಗಳ ಮುನ್ನಡೆ ಸಾಧಿಸಿದೆ.

ಇದನ್ನು ಓದಿ: ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ಕುಕ್

ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಕುಕ್-ರೂಟ್ ಜೋಡಿ ಮೂರನೇ ವಿಕೆಟ್’ಗೆ ಮುರಿಯದ 181 ರನ್’ಗಳ ಜತೆಯಾಟದಲ್ಲಿ ಪಾಲ್ಗೊಂಡರು. ಇನ್ನು ವಿದಾಯದ ಪಂದ್ಯವನ್ನಾಡುತ್ತಿರುವ ಕುಕ್ 33ನೇ ಟೆಸ್ಟ್ ಶತಕ ಸಿಡಿಸಿ ಸ್ಮರಣಿಯವಾಗಿಸಿಕೊಂಡರೆ, ಟೂರ್ನಿಯುದ್ದಕ್ಕೂ ರನ್ ಬರ ಅನುಭವಿಸುತ್ತಿದ್ದ ನಾಯಕ ಜೋ ರೂಟ್ 92 ರನ್ ಸಿಡಿಸಿ ಶತಕದ ಹೊಸ್ತಿಲಲ್ಲಿ ಇದ್ದಾರೆ.

ಬಹುತೇಕ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿರುವ ಇಂಗ್ಲೆಂಡ್ ಸರಣಿಯನ್ನು 4-1 ಅಂತರದಲ್ಲಿ ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದ್ದರೆ, ಭಾರತ ಶತಾಯಗತಾಯ ಕಮ್’ಬ್ಯಾಕ್ ಮಾಡಲು ಹೆಣಗಾಡುತ್ತಿದೆ.

ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 332 ಮತ್ತು 243/2
ಕುಕ್: 103*
ಭಾರತ: 292/10
ಜಡೇಜಾ: 86*
[* ವಿವರ ಅಪೂರ್ಣ]   

Last Updated 19, Sep 2018, 9:22 AM IST