
ಓವಲ್[ಸೆ.10]: ಆಲಿಸ್ಟರ್ ಕುಕ್ ಅಜೇಯ ಶತಕ ಹಾಗೂ ನಾಯಕ ಜೋ ರೂಟ್ ಅಮೋಘ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಾಲ್ಕನೇ ದಿನದಾಟದಲ್ಲಿ 395 ರನ್ ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ.
286 ಚೆಂಡುಗಳನ್ನು ಎದುರಿಸಿದ ಕುಕ್ 147 ರನ್ ಗಳಿಸಿ ತಮ್ಮ ವಿದಾಯವನ್ನು ಸ್ಮರಣೀಯವಾಗಿರಿಸಿಕೊಂಡರು. ಹನುಮಾ ವಿಹಾರಿ ಬೌಲಿಂಗ್ ನಲ್ಲಿ ಪಂತ್ ಗೆ ಕ್ಯಾಚ್ ನೀಡಿದ ಕುಕ್ 3 ರನ್ ಗಳಿಂದ 150 ರನ್ ಗಳಿಸುವ ಅವಕಾಶ ಕೈಚೆಲ್ಲಿಕೊಂಡರು.
ಟೆಸ್ಟ್ ವೃತ್ತಿ ಜೀವನದ 33ನೇ ಶತಕ ದಾಖಲಿಸಿದ ಇಂಗ್ಲೆಂಡ್ ಕಂಡ ಅದ್ಭುತ ಎಡಗೈ ದಾಂಡಿಗನ ಆಟ ಇನ್ನು ಮುಂದೆ ಅಭಿಮಾನಿಗಳಿಗೆ ಕಾಣಸಿಗದು. ಸಾಮಾಜಿಕ ತಾಣದಲ್ಲಿಯೂ ಕುಕ್ ಸಾಧನೆಯ ಗುಣಗಾನ ಆರಂಭವಾಗಿದೆ. ಎಲ್ಲ ಕ್ರಿಕೆಟ್ ಪ್ರೇಮಿಗಳಿಂದ ಅಲಿಸ್ಟರ್ ಕುಕ್ ಗೆ ಅಭಿನಂದನೆ ಮತ್ತು ಗುಡ್ ಲಕ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.