
ಭಾರತ-ಆಸ್ಟ್ರೇಲಿಯಾ ಒಂಡೇ ಸಿರೀಸ್ ಅನ್ನೋದಕ್ಕಿಂತ ಹ್ಯಾಟ್ರಿಕ್ ಸಿರೀಸ್ ಅಂದ್ರೆ ಉತ್ತಮ. ಯಾಕಂದ್ರೆ ಆಡಿರುವ 4 ಪಂದ್ಯದಲ್ಲೂ ಹ್ರಾಟ್ರಿಕ್ ಸಾಧನೆಗಳಾಗಿವೆ. ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ಹ್ಯಾಟ್ರಿಕ್ ದಾಖಲೆ ನಿರ್ಮಾಣವಾಗಿದೆ. ಹೀಗಾಗಿಯೇ ಎಲ್ಲರೂ ಈ ಸರಣಿಯನ್ನ ಹ್ಯಾಟ್ರಿಕ್ ಸರಣಿ ಅಂತ ಕರಿತಿದ್ದಾರೆ. ಹ್ಯಾಟ್ರಕ್ನಿಂದಲೇ ಈ ಸಿರೀಸ್ ಫೇಮಸ್ ಆಗಿದೆ.
ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಆಯ್ತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಸೀಸ್ ಸ್ಪಿನ್ನರ್ ಆಡಂ ಜಂಪಾಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ್ರು. ಜಂಪಾ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸ್ ಸಿಡಿಸಿ ಪಾಂಡ್ಯ, ಕಾಂಗರೂಗಳನ್ನ ಹಿಂಡಿ ಹಿಪ್ಪೆಕಾಯಿ ಮಾಡಿದ್ದರು. ಈ ಮೂಲ್ಕ ಏಕದಿನ ಕ್ರಿಕೆಟ್ನಲ್ಲಿ 4ನೇ ಸಲ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಸಾಧನೆಯನ್ನೂ ಮಾಡಿದ್ದರು.
2ನೇ ಪಂದ್ಯ - ಕುಲ್ದೀಪ್ ಹ್ಯಾಟ್ರಿಕ್ ವಿಕೆಟ್
ಭಾರತದ ಕ್ರಿಕೆಟ್ ಕಾಶಿಯಲ್ಲಿ ಚೈನಾಮ್ಯಾನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಭ್ರಮಿಸಿದ್ದರು. ಮ್ಯಾಥ್ಯೂ ವೇಡ್, ಅಸ್ಟನ್ ಅಗರ್ ಮತ್ತು ಪ್ಯಾಟ್ ಕಮ್ಮಿನ್ಸ್ ವಿಕೆಟ್ ಪಡೆದಿದ್ದರು. ಈ ಮೂಲಕ ಒಂಡೇ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ 3ನೇ ಬೌಲರ್ ಎನಿಸಿದ್ದರು. ಅಷ್ಟೇ ಅಲ್ಲ ಅಂಡರ್-19 ಮತ್ತು ಸೀನಿಯರ್ ಟೀಮ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಇಂದೋರ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಮೂರು ಹ್ಯಾಟ್ರಿಕ್ ಸಾಧನೆಗಳಾದ್ವು. ಯುಜವೆಂದ್ರ ಚಹಲ್ ಸತತ ಮೂರನೇ ಪಂದ್ಯದಲ್ಲೂ ಗ್ಲೇನ್ ಮ್ಯಾಕ್ಸ್ವೆಲ್ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧಿಸಿದ್ರು. ಮ್ಯಾಕ್ಸ್ವೆಲ್ಗೆ ಚಹಲ್ ಫೋಬಿಯಾ ಇದೆ ಅನ್ನೋದು ಸಾಬೀತಾಯ್ತು.ಇನ್ನು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹ್ಯಾಟ್ರಿಕ್ ಜಯ ಸಾಧಿಸ್ತು. ಅಷ್ಟೇ ಅಲ್ಲ, ಒಟ್ಟಾರೆ ಟೀಂ ಇಂಡಿಯಾಗೆ ಸತತ 9ನೇ ಜಯ ಇದಾಗಿತ್ತು. ತ್ರಿಬಲ್ ಹ್ಯಾಟ್ರಿಕ್ ಸಾಧಿಸಿ ಭಾರತೀಯರು ಸಂಭ್ರಮಿಸಿದ್ದರು.
4ನೇ ಪಂದ್ಯ - ರಹಾನೆ ಹ್ಯಾಟ್ರಿಕ್ ಅರ್ಧಶತಕ
ಬೆಂಗಳೂರಿನಲ್ಲಿ ನಡೆದ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋತ್ರೂ ಹ್ಯಾಟ್ರಿಕ್ ಸಾಧನೆ ಮಾತ್ರ ನಿಲ್ಲಲಿಲ್ಲ. ಅಜಿಂಕ್ಯಾ ರಹಾನೆ ಚೆನ್ನೈನಲ್ಲಿ ವಿಫಲರಾಗಿ ಭಾರೀ ನಿರಾಸೆ ಅನುಭವಿಸಿದ್ರು. ಆದ್ರೆ ಉಳಿದ ಮೂರು ಪಂದ್ಯದಲ್ಲೂ ಮೂರು ಹಾಫ್ ಸೆಂಚುರಿ ಬಾರಿಸಿದ್ರು. ಈ ಮೂಲ್ಕ ಹ್ಯಾಟ್ರಿಕ್ ಅರ್ಧಶತಕ ದಾಖಲಿಸಿದ ಕೀರ್ತಿಗೆ ಪಾತ್ರರಾದ್ರು.
5ನೇ ಪಂದ್ಯದಲ್ಲೂ ಆಗುತ್ತಾ ಹ್ಯಾಟ್ರಿಕ್..?
ಇಂದು ನಾಗ್ಪುರದಲ್ಲಿ ಭಾರತ-ಆಸೀಸ್ 5ನೇ ಹಾಗೂ ಕೊನೆ ಫೈಟ್ ನಡೆಸ್ತಿವೆ. ಕಳೆದ ನಾಲ್ಕು ಪಂದ್ಯದಲ್ಲೂ ಒಂದಲ್ಲ ಒಂದು ಹ್ಯಾಟ್ರಿಕ್ ಸಾಧನೆಗಳಾಗಿವೆ. ಈ ಪಂದ್ಯದಲ್ಲೂ ಹ್ಯಾಟ್ರಿಕ್ ಆಗುತ್ತಾ..? ಆ ಹ್ಯಾಟ್ರಿಕ್ ಸಾಧನೆ ಮಾಡೋಱರು..? ಈ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.