ಬರ್ತ್'ಡೇ ಬಾಯ್ ಗಂಭೀರ್, ಯುವಿ, ಉತ್ತಪ್ಪ ಫೇಲ್; ಶೈನ್ ಆದ ಜಡ್ಡು

Published : Oct 14, 2017, 08:35 PM ISTUpdated : Apr 11, 2018, 01:01 PM IST
ಬರ್ತ್'ಡೇ ಬಾಯ್ ಗಂಭೀರ್, ಯುವಿ, ಉತ್ತಪ್ಪ ಫೇಲ್; ಶೈನ್ ಆದ ಜಡ್ಡು

ಸಾರಾಂಶ

ವಿದರ್ಭ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಯುವರಾಜ್ ಸಿಂಗ್ ಕೇವಲ 20 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ನವದೆಹಲಿ(ಅ.14): ಟೀಂ ಇಂಡಿಯಾ ಎಡಗೈ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಇಂದು 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕೇವಲ 2 ರನ್ ಬಾರಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಟೀಂ ಇಂಡಿಯಾದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಜಮ್ಮು ಕಾಶ್ಮೀರ ವಿರುದ್ಧ ಅಜೇಯ 150 ರನ್ ಸಿಡಿಸಿ ಗಮನ ಸೆಳೆದಿದ್ದಾರೆ.

ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಭರ್ಜರಿ ಬ್ಯಾಟಿಂಗ್ ನಡೆಸಿರುವ ಜಡೇಜಾ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಜಮ್ಮು ಕಾಶ್ಮೀರ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ ೧೫೦ ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜಡೇಜಾ ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ, 2 ಸಿಕ್ಸರ್ ಸೇರಿವೆ.

ಉತ್ತಪ್ಪ ಮತ್ತೆ ಫೇಲ್: ಕರ್ನಾಟಕ ತಂಡ ತೊರೆದು ಸೌರಾಷ್ಟ್ರ ತಂಡ ಸೇರಿಕೊಂಡಿರುವ ರಾಬಿನ್ ಉತ್ತಪ್ಪ  37 ರನ್ ಬಾರಿಸುವುದರೊಂದಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಈ ಮೊದಲು ಹರ್ಯಾಣ ತಂಡದ ವಿರುದ್ಧ ಕೇವಲ 7 ರನ್'ಗಳನ್ನಷ್ಟೇ ಬಾರಿಸಿದ್ದರು.

ಇನ್ನು ವಿದರ್ಭ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಯುವರಾಜ್ ಸಿಂಗ್ ಕೇವಲ 20 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಪಂದ್ಯಗಳ ಸ್ಕೋರ್ ವಿವರ:

ಗೋವಾ 255/10 ವಿರುದ್ಧ ಹಿಮಾಚಲ ಪ್ರದೇಶ 2/0

ತಮಿಳುನಾಡು ವಿರುದ್ಧ ತ್ರಿಪುರಾ 244/7

ಆಂಧ್ರಪ್ರದೇಶ ವಿರುದ್ಧ ಬರೋಡಾ 247/7

ಜಾರ್ಖಂಡ್ ವಿರುದ್ಧ ರಾಜಸ್ಥಾನ 250/4

ರೈಲ್ವೇಸ್ ವಿರುದ್ಧ ದೆಹಲಿ 218/6

ಪಂಜಾಬ್ 161/10 ವಿರುದ್ಧ ವಿದರ್ಭ 106/1

ಮುಂಬೈ ವಿರುದ್ಧ ಮಧ್ಯಪ್ರದೇಶ 250/5

ಕೇರಳ 208/10 ವಿರುದ್ಧ ಗುಜರಾತ್ 60/2

ಜಮ್ಮು ಕಾಶ್ಮೀರ ವಿರುದ್ಧ ಸೌರಾಷ್ಟ್ರ 428/8

ಛತ್ತಿಸ್‌'ಗಢ ವಿರುದ್ಧ ಬಂಗಾಳ 283/2

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್: ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?
ಎರಡು ಮ್ಯಾಚ್ ಬಾಕಿ ಇರುವಂತೆಯೇ ಆ್ಯಶಸ್ ಕಿರೀಟ ಗೆದ್ದ ಆಸ್ಟ್ರೇಲಿಯಾ! ಇಂಗ್ಲೆಂಡ್‌ಗೆ ರೋಚಕ ಸೋಲು