
ದುಬೈ(ಜೂ.20]: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟಗೊಂಡಿದ್ದು 2019ರ ಜುಲೈನಲ್ಲಿ ಕೆರಿಬಿಯನ್’ನಲ್ಲಿ ಭಾರತ ತಂಡವು ವೆಸ್ಟ್’ಇಂಡಿಸ್ ತಂಡವನ್ನು ಎದುರಿಸಲಿದೆ.
2018-2023ರವರೆಗಿನ ಐಸಿಸಿ ವೇಳಾಪಟ್ಟಿಯನ್ನು ಕ್ರಿಕೆಟ್ ಆಡಳಿತ ಮಂಡಳಿ ಬಿಡುಗಡೆಗೊಳಿಸಿತು. ಐಸಿಸಿ ನಿಯಮದಂತೆ ಅಗ್ರ 9 ಶ್ರೇಯಾಂಕಿತ ತಂಡಗಳು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. 2019ರ ಜುಲೈ 15ರಿಂದ 2021ರ ಏಪ್ರಿಲ್ 30ರ ವರೆಗೆ ಈ ಪಂದ್ಯಾವಳಿಗಳು ನಡೆಯಲಿವೆ.
ಪ್ರತಿ ತಂಡವು ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ತಂಡವು 6 ತವರು ಹಾಗೂ ತವರಿನಾಚೆ ಸರಣಿಗಳನ್ನು ಆಡಲಿದೆ. ಜೂನ್ 2021ರ ವೇಳೆಗೆ ಅಗ್ರ 2 ಶ್ರೇಯಾಂಕ ಹೊಂದಿರುವ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿವೆ. ಇಂಗ್ಲೆಂಡ್ ನೆಲದಲ್ಲಿ ನಡೆಯುವ ಆ್ಯಷಸ್ ಸರಣಿ ಮೂಲಕ ಐತಿಹಾಸಿಕ ಟೂರ್ನಿ ಆರಂಭಗೊಳ್ಳಲಿದೆ.
ಇನ್ನು ಭಾರತ ತಂಡವು 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.