2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌?

By Web Desk  |  First Published Nov 28, 2018, 9:09 AM IST

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸೋ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಇದೀಗ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಸ್ರೇರ್ಪಡಿಸಲು ಐಸಿಸಿ ಮುಂದಾಗಿದೆ.


ದುಬೈ(ನ.28): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸೋಮವಾರ, 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್‌ ಸೇರ್ಪಡೆಗೊಳಿಸುವಂತೆ ಕಾಮನ್‌ವೆಲ್ತ್‌ ಕ್ರೀಡಾಕೂಟ ಫೆಡರೇಷನ್‌ (ಸಿಜಿಎಫ್‌) ಬಿಡ್‌ ಸಲ್ಲಿಸಿದೆ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಸಹಯೋಗದಲ್ಲಿ ಐಸಿಸಿ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಈ ವರೆಗೂ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕೇವಲ ಒಮ್ಮೆ ಮಾತ್ರ ಕ್ರಿಕೆಟ್‌ ನಡೆದಿತ್ತು. ಅದು 1998ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಪುರುಷರ ತಂಡಗಳು ಮಾತ್ರ ಸ್ಪರ್ಧಿಸಿದ್ದವು. ದ.ಆಫ್ರಿಕಾ ತಂಡ ಚಿನ್ನದ ಪದಕ ಗಳಿಸಿತ್ತು. ‘ಮಹಿಳ್ರಾಕ್ರಿಕೆಟ್‌ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವಕಾಶ ನೀಡಿದರೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟುಪ್ರಚಾರ ಸಿಗಲಿದೆ. ಇನ್ನೂ ಹೆಚ್ಚು ಯುವತಿಯರನ್ನು ಕ್ರಿಕೆಟ್‌ನತ್ತ ಸೆಳೆಯಲು ಸಾಧ್ಯವಾಗಲಿದೆ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Latest Videos

undefined

ಕಾಮನ್‌ವೆಲ್ತ್‌ ಗೇಮ್ಸ್‌ ಏಕೆ?: ಕ್ರಿಕೆಟ್‌ ಆಡುವ ಬಹುತೇಕ ರಾಷ್ಟ್ರಗಳು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ. ಭಾರತ, ಆಸ್ಪ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ಕ್ರೀಡಾಕೂಟದಲ್ಲಿ ಆಡಲಿವೆ. ಹೀಗಾಗಿ, ಕ್ರಿಕೆಟ್‌ಗೆ ಸಹಜವಾಗಿಯೇ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲಿದೆ.

ಮಾದರಿ ಹೇಗಿರಲಿದೆ?: ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ಗೆ ಸಲ್ಲಿಸಿರುವ ಬಿಡ್‌ನಲ್ಲಿ ಐಸಿಸಿ ಪಂದ್ಯಾವಳಿ ಮಾದರಿಯನ್ನು ಪ್ರಸ್ತಾಪಿಸಿದೆ. 8 ತಂಡಗಳ ಟಿ20 ಟೂರ್ನಿ ನಡೆಯಲಿದ್ದು, ತಲಾ 4 ತಂಡಗಳಂತೆ 2 ಗುಂಪುಗಳಾಗಿ ರಚಿಸುವುದು. 2 ಕ್ರೀಡಾಂಗಣಗಳಲ್ಲಿ 8 ದಿನಗಳ ಕಾಲ ಒಟ್ಟು 16 ಪಂದ್ಯಗಳನ್ನು ನಡೆಸಲಾಗುವುದು ಎಂದು ಐಸಿಸಿ ತಿಳಿಸಿದೆ. ಐಸಿಸಿಯ ಈ ನಡೆಯನ್ನು ಅಂತಾರಾಷ್ಟ್ರೀಯ ತಂಡಗಳು ಸ್ವಾಗತಿಸಿವೆ. ಭಾರತ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಇದೊಂದು ಅದ್ಭುತ ಐಡಿಯಾ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಆಡುವುದರಿಂದ ಇನ್ನೂ ಹೆಚ್ಚು ಅಭಿಮಾನಿಗಳನ್ನು ಪಡೆಯಲಿದ್ದೇವೆ. ಮಹಿಳಾ ತಂಡಗಳಿಗೆ ಮತ್ತಷ್ಟುಪಂದ್ಯಗಳು ಸಿಗಲಿವೆ. ಈ ನಿರ್ಧಾರದಿಂದ ಬಹಳ ಖುಷಿಯಾಗಿದೆ’ ಎಂದಿದ್ದಾರೆ.

click me!