
ನವದೆಹಲಿ(ಜ.08): ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲೇ ಭದ್ರವಾಗಿದೆ. ಇನ್ನು ಆಸೀಸ್ ತಂಡವು ಪಾಕಿಸ್ತಾನವನ್ನು 3-0ಯಿಂದ ಸರಣಿಯನ್ನು ಕ್ಲೀನ್'ಸ್ವೀಪ್ ಮಾಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಆಸೀಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಹ್ಲಿಯನ್ನು ಹೊರತುಪಡಿಸಿದರೆ ಭಾರತದ ಯಾವೊಬ್ಬ ಆಟಗಾರನೂ ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕೊಹ್ಲಿ ಬಿಟ್ಟರೆ ಚೇತೇಶ್ವರ ಪೂಜಾರ(12), ಅಜಿಂಕ್ಯಾ ರಹಾನೆ(16)ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತದ ಅಗ್ರ ಸ್ಪಿನ್ನರ್'ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮೊದಲೆರಡು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಸೀಸ್ ತಂಡದ ವೇಗಿ ಜೋಸ್ ಹ್ಯಾಜೆಲ್'ವುಡ್ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ತಂಡಗಳ ವಿಭಾಗದಲ್ಲಿ ಭಾರತ 120 ರೇಟಿಂಗ್'ನಲ್ಲಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಆಸ್ಟ್ರೇಲಿಯಾ 109 ರೇಟಿಂಗ್'ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಐಸಿಸಿ ಬಿಡುಗಡೆ ಮಾಡಿದ ಪಟ್ಟಿ ಇಂತಿದೆ
ತಂಡಗಳು
1. ಭಾರತ
2. ಆಸ್ಟ್ರೇಲಿಯಾ
3. ದಕ್ಷಿಣ ಆಫ್ರಿಕಾ
4. ಇಂಗ್ಲೆಂಡ್
5. ಪಾಕಿಸ್ತಾನ
6. ನ್ಯೂಜಿಲ್ಯಾಂಡ್
7. ಶ್ರೀಲಂಕಾ
8. ವೆಸ್ಟ್'ಇಂಡೀಸ್
9. ಬಾಂಗ್ಲಾದೇಶ
10. ಜಿಂಬಾಬ್ವೆ
ಬ್ಯಾಟ್ಸ್'ಮನ್'ಗಳು
1. ಸ್ಟೀವನ್ ಸ್ಮಿತ್
2. ವಿರಾಟ್ ಕೊಹ್ಲಿ
3. ಜೋ ರೂಟ್
4. ಕೇನ್ ವಿಲಿಯಮ್ಸನ್
5. ಡೇವಿಡ್ ವಾರ್ನರ್
6.ಅಜರ್ ಅಲಿ
7. ಯೂನಸ್ ಖಾನ್
8. ಕ್ವಿಂಟಾನ್ ಡಿ'ಕಾಕ್
9. ಎಬಿ ಡಿವಿಲಿಯರ್ಸ್
10. ಹಶೀಮ್ ಆಮ್ಲಾ
ಬೌಲರ್
1. ರವಿಚಂದ್ರನ್ ಅಶ್ವಿನ್
2. ರವೀಂದ್ರ ಜಡೇಜಾ
3. ಜೋಸ್ ಹ್ಯಾಜಲ್'ವುಡ್
4. ರಂಗನಾ ಹೆರಾತ್
5. ಡೇಲ್ ಸ್ಟೇನ್
6. ಜೇಮ್ಸ್ ಆ್ಯಂಡರ್ಸನ್
7. ಸ್ಟುವರ್ಟ್ ಬ್ರಾಡ್
8. ಕಗಿಸೋ ರಬಾಡ
9. ವಾರ್ನೆ ಫಿಲಾಂಡರ್
10. ಮಿಚಲ್ ಸ್ಟಾರ್ಕ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.