
ಮುಂಬೈ(ಎ.28): ಹಣಕಾಸು ಹಂಚಿಕೆಗೆ ಚಾಲ್ತಿಯಲ್ಲಿದ್ದ ಬಿಗ್ ‘ತ್ರೀ' ಮಾದರಿಯನ್ನು ಕಿತ್ತೊಗೆದಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹೊಸ ಮಾದರಿಯನ್ನು ಜಾರಿಗೆ ತಂದಿದ್ದು, ಇದರನ್ವಯ ಬಿಸಿಸಿಐ ಆದಾಯವನ್ನು ಅರ್ಧದಷ್ಟುಕಡಿತಗೊಳಿಸಲಾಗಿದೆ. ಕಳೆದ ವರ್ಷದ ವರೆಗೂ ಐಸಿಸಿಯಿಂದ 570 ಮಿಲಿಯನ್ ಡಾಲರ್ (ಅಂದಾಜು .3657.12 ಕೋಟಿ ) ಪಡೆಯುತ್ತಿದ್ದ ಬಿಸಿಸಿಐ ಇನ್ಮುಂದೆ 8 ವರ್ಷಗಳ ಅವಧಿಗೆ 293 ಮಿಲಿಯನ್ ಡಾಲರ್ (ಅಂದಾಜು . 1879.44 ಕೋಟಿ)ಗಳನ್ನಷ್ಟೇ ಪಡೆ ಯಲಿದೆ. ಅದ್ಯಾಗೂ ಉಳಿದೆಲ್ಲಾ ಕ್ರಿಕೆಟ್ ಮಂಡಳಿ ಗಳಿಗಿಂತ ಬಿಸಿಸಿಐ ಆದಾಯ ಶೇಖಡ 100ರಷ್ಟುಹೆಚ್ಚಿದೆ.
ಬುಧವಾರ ತನ್ನ ವಿರುದ್ಧವಾಗಿ ನಡೆದ ಮತ ದಾನದಿಂದ ಮುಖಭಂಗಕ್ಕೆ ಒಳಗಾಗಿದ್ದ ಬಿಸಿಸಿಐ, ವಿಶ್ವ ಕ್ರಿಕೆಟ್ ಸಮಿತಿಯ ತೀರ್ಮಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ಮೊದಲು ಪ್ರಸ್ತಾಪಿಸಿದ್ದ 100 ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯವನ್ನು ತಿರಸ್ಕರಿಸಿತ್ತು. ಆದರೆ ಐಸಿಸಿ ತನ್ನ 100 ಮಿಲಿಯನ್ ಡಾಲರ್ ಪ್ರಸ್ತಾಪವನ್ನೂ ಇನ್ನೂ ಹಿಂಪಡೆದಿಲ್ಲ. ಬಿಸಿಸಿಐ ಒಪ್ಪಿಕೊಂಡರೆ ಮುಂದಿನ ಸಭೆಯಲ್ಲಿ ಅನುಮೋದನೆಗೊಳಿಸುವುದಾಗಿ ತಿಳಿಸಿದೆ. ಆದರೆ ಬಿಸಿಸಿಐ ಕೊನೆ ಪಕ್ಷ 450 ಮಿಲಿಯನ್ ಡಾಲರ್ (. 2885.24 ಕೋಟಿ)ಗಳನ್ನಾದರೂ ನೀಡಲೇಬೇಕು ಜತೆಗೆ ಸಂವಿಧಾನದಲ್ಲಿ ಯಾವುದೇ ತಿದ್ದುಪಡಿ ಮಾಡಬಾರದು ಎಂದು ಪಟ್ಟು ಹಿಡಿದಿದೆ.
ಇದೇ ವೇಳೆ ಬಿಗ್ ‘ತ್ರೀ'ಯ ಭಾಗವಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 8 ವರ್ಷಗಳಲ್ಲಿ 143 ಮಿಲಿಯನ್ ಡಾಲರ್ (. 917.3 ಕೋಟಿ) ಪಡೆಯ ಲಿದೆ. ಈ ಮೊದಲಿಗಿಂತ ಕೇವಲ 40 ಮಿಲಿಯನ್ ಡಾಲರ್ ಮಾತ್ರ ಕಡಿತಗೊಳಿಸಲಾಗಿದ್ದರೆ, ಆಸ್ಪ್ರೇಲಿ ಯಾಗೆ 0.75 ಮಿಲಿಯನ್ ಡಾಲರ್ ಹೆಚ್ಚಿಗೆಸಿಗುತ್ತಿದೆ. ಜಿಂಬಾಬ್ವೆ ಕ್ರಿಕೆಟ್ ಮಂಡಳಿಗೆ 94 ಮಿಲಿಯನ್ ಡಾಲರ್ (.602.9 ಕೋಟಿ) ಸಿಕ್ಕರೆ, ಇನ್ನುಳಿದ 7 ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ಮಂಡಿಗಳಿಗೆ ತಲಾ 132 ಮಿಲಿಯನ್ ಡಾಲರ್ (.846.6 ಕೋಟಿ) ದೊರೆಯಲಿದ್ದು, ಅಸೋಸಿಯೇಟ್ ರಾಷ್ಟ್ರಗಳಿಗೆ 280 ಮಿಲಿಯನ್ ಡಾಲರ್ (.1795.99 ಕೋಟಿ) ಹಣ ಸಹಾಯ ಸಿಗಲಿದೆ ಎಂದು ಐಸಿಸಿ ತಿಳಿಸಿದೆ. ಇನ್ನು ಸಂವಿಧಾನದಲ್ಲಿ ತಿದ್ದುಪಡಿಗೆ 12 ಸದಸ್ಯ ರಾಷ್ಟ್ರಗಳ ಸಮ್ಮತಿ ಸಿಕ್ಕಿದ್ದು, ಜೂನ್ನಲ್ಲಿ ನಡೆಯಲಿ ರುವ ವಾರ್ಷಿಕ ಸಭೆಯಲ್ಲಿ ಜಾರಿಗೆ ತರಲಾಗುತ್ತದೆ.
‘‘ವಿಶ್ವ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದೊಂದು ಪ್ರಾಮಾಣಿಕ ಪ್ರಯತ್ನ. ವಾರ್ಷಿಕ ಸಭೆಯಲ್ಲಿ ಸಂವಿಧಾನ ತಿದ್ದುಪಡಿಯನ್ನು ಜಾರಿಗೆ ತರಲಾಗುತ್ತದೆ. ಭದ್ರ ಅಡಿಪಾಯ ಹಾಕುವ ಮೂಲಕ, ಜಾಗತಿಕ ಮಟ್ಟದಲ್ಲಿ ಕ್ರೀಡೆಯ ಬೆಳವಣಿಗೆ ಸಾಧ್ಯ ಅನ್ನುವುದು ನನ್ನ ನಂಬಿಕೆ. ಹಣಕಾಸು ಹಂಚಿಕೆಯಲ್ಲಿ ಸಮಾನತೆ ತರುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು'' ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.