ಟಿ20ಯಲ್ಲೂ ಇನ್ಮುಂದೆ ಡಿಆರ್'ಎಸ್..?

Published : May 26, 2017, 06:03 PM ISTUpdated : Apr 11, 2018, 01:12 PM IST
ಟಿ20ಯಲ್ಲೂ ಇನ್ಮುಂದೆ ಡಿಆರ್'ಎಸ್..?

ಸಾರಾಂಶ

2017ರ ಅಕ್ಟೋಬರ್ ವೇಳೆಗೆ ಟಿ20ಯಲ್ಲಿ ಡಿಆರ್'ಎಸ್ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.

ಲಂಡನ್‌(ಮೇ.26): ಅಂತರಾಷ್ಟ್ರೀಯ ಕ್ರಿಕೆಟ್‌ ಕಮಿಟಿಯು ಟಿ20 ಪಂದ್ಯ­ಗಳಲ್ಲೂ ಅಂಪೈರ್‌ ತೀರ್ಪು ಮೇಲ್ಮನವಿ ಪದ್ಧತಿ (ಯುಡಿಆರ್‌ಎಸ್‌) ಅಳವಡಿಸಬೇಕು ಎಂದು ಶಿಫಾರಸು ಮಾಡಿದೆ.

ಭಾರತ ತಂಡದ ಕೋಚ್‌ ಅನಿಲ್‌ ಕುಂಬ್ಳೆ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು.

ಈ ತೀರ್ಮಾನದ ಜತೆಗೆ ಮೈದಾನದಲ್ಲಿ ಆಟಗಾರರು ಅಸಭ್ಯವಾಗಿ ವರ್ತಿಸಿದಾಗ ಅವರನ್ನು ಹೊರಗಟ್ಟಲು ಅಂಪೈರ್‌'ಗಳಿಗೆ ಅಧಿಕಾರ ನೀಡಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.

ಡಿಆರ್‌'ಎಸ್‌'ಗೆ ಮೊರೆ ಹೋದಾಗ, ಒಂದೊಮ್ಮೆ ಎಲ್‌'ಬಿ ಅಂಪೈರ್‌ ತೀರ್ಮಾನವೆಂದು ಬಂದಾಗ ತಂಡಗಳು ಮನವಿ ಕಳೆದುಕೊಳ್ಳುವುದು ಬೇಡ ಎನ್ನುವ ಪ್ರಸ್ತಾಪವನ್ನೂ ಮಾಡಲಾಯಿತು.

2017ರ ಅಕ್ಟೋಬರ್ ವೇಳೆಗೆ ಟಿ20ಯಲ್ಲಿ ಡಿಆರ್'ಎಸ್ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.

ಐಸಿಸಿ ಕಮಿಟಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ಆ್ಯಂಡ್ರೂ ಸ್ಟ್ರಾಸ್, ಮಹೇಲ ಜಯವರ್ಧನೆ ಹಾಗೂ ಡ್ಯಾರನ್ ಲೆಹ್ಮನ್ ಸದಸ್ಯರಾಗಿದ್ದು, ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ಸಕ್ರಿಯ ಅಟಗಾರ
ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!