
ಕರಾಚಿ(ಮೇ.26): ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ 7 ದ್ವಿಶತಕಗಳು ಬಂದಿವೆ. ಅದರಲ್ಲಿ ಭಾರತೀಯರೇ 4 ಸಿಡಿಸಿದ್ದಾರೆ.
ಈಗ ಪಾಕಿಸ್ತಾನದ ಕ್ಲಬ್ ಆಟಗಾರನೊಬ್ಬ ತ್ರಿಶಕ ಬಾರಿಸಿದ್ದಾನೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಶ್ರಯದಲ್ಲಿ ನಡೆಯುತ್ತಿರುವ ಝಲ್ ಮೆಹಮೂದ್ ಅಂತರ ಕ್ಲಬ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಬಿಲಾಲ್ ಅರ್ಷದ್ ಎಂಬ 26 ವರ್ಷದ ಯುವಕ 175 ಎಸತಗಳಲ್ಲಿ 320 ರನ್ ಚಚ್ಚಿ ಹೊಸ ದಾಖಲೆ ಬರೆದಿದ್ದಾನೆ.
ಈತನ ಆಟದಲ್ಲಿ 42 ಬೌಂಡರಿ ಹಾಗೂ 9 ಸಿಕ್ಸರ್‌ಗಳಿದ್ದವು. ಈತನ ತಂಡ 50 ಓವರ್‌ಗಳಲ್ಲಿ 556 ರನ್ ಪೇರಿಸಿತ್ತಲ್ಲದೇ 411 ರನ್‌ಗಳ ಬೃಹತ್ ಗೆಲುವು ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.