ಇನ್ಮುಂದೆ ಚಾಂಪಿಯನ್ಸ್ ಟ್ರೋಫಿ ನಡೆಯೋದು ಡೌಟು..!

By Suvarna Web DeskFirst Published Jun 20, 2017, 6:21 PM IST
Highlights

‘ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಹೀಗೆ ಎರಡು, 50 ಓವರ್‌'ಗಳ ಏಕದಿನ ಪಂದ್ಯಾವಳಿ ಆಯೋಜಿಸುವ ಅವಶ್ಯಕತೆ ಇಲ್ಲ ಎಂದೆನಿಸುತ್ತದೆ’

ದುಬೈ(ಜೂ.20): ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುವುದು ಬಹುತೇಕ ಅನುಮಾನ ಎಂಬ ಸುಳಿವನ್ನು ಐಸಿಸಿ ಸಿಇಓ ಡೇವಿಡ್ ರಿಚರ್ಡ್'ಸನ್ ನೀಡಿದ್ದಾರೆ.

ಹೌದು ಇನ್ಮಂದೆ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಚಾಂಪಿಯನ್ಸ್ ಟ್ರೋಫಿ ಬದಲಿಗೆ ಎರಡು ವರ್ಷಗಳಿಗೊಮ್ಮೆ ಎರಡು ಬಾರಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೆ ಚಿಂತನೆ ನಡೆಸಲಾಗಿದೆ ಎಂದು ರಿಚರ್ಡ್'ಸನ್ ತಿಳಿಸಿದ್ದಾರೆ. ಎಲ್ಲವೂ ಈ ಮೊದಲಿ ವೇಳಾಪಟ್ಟಿಯಂತೆ ಅಂದುಕೊಂಡಂತೆ ಆದರೆ 2021ರಲ್ಲಿ ಭಾರತವು ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಲಿದೆ.

ಈ ಬಗ್ಗೆ ಮಾತನಾಡಿರುವ ರಿಚರ್ಡ್‌ಸನ್, ‘2021ರ ಬಳಿಕ ಮತ್ತೊಂದು ಚಾಂಪಿಯನ್ಸ್ ಟ್ರೋಫಿ ನಡೆಯುತ್ತದೆ ಎಂಬ ಯಾವುದೇ ಖಾತರಿ ನೀಡುವುದಿಲ್ಲ. ಈ ಕುರಿತು ಓವಲ್‌'ನಲ್ಲಿ ನಡೆಯಲಿರುವ ಐಸಿಸಿಯ ವಾರ್ಷಿಕ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದಿದ್ದಾರೆ.

‘ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಹೀಗೆ ಎರಡು, 50 ಓವರ್‌'ಗಳ ಏಕದಿನ ಪಂದ್ಯಾವಳಿ ಆಯೋಜಿಸುವ ಅವಶ್ಯಕತೆ ಇಲ್ಲ ಎಂದೆನಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

 

click me!