ಕ್ರಿಕೆಟ್ ರೂಲ್ಸ್'ಗಳಲ್ಲಿ ಮೇಜರ್ ಸರ್ಜರಿ ಮಾಡಿದ ಐಸಿಸಿ

By Suvarna Web DeskFirst Published Jun 25, 2017, 3:55 PM IST
Highlights

ಇನ್ನು ಆಟಗಾರರು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದರೆ ಅಂಪೈರ್‌ ಕೆಂಪು ಕಾರ್ಡ್‌ ನೀಡಿ ಮೈದಾನದಿಂದ ಹೊರ ಹಾಕಬಹುದು.

ದುಬೈ(ಜೂ.25): ಟಿ20 ಪಂದ್ಯಗಳಲ್ಲೂ ಡಿಆರ್‌ಎಸ್‌ (ಅಂಪೈರ್‌ ತೀರ್ಪು ಮೇಲ್ಮನವಿ ಪದ್ಧತಿ) ಅಳವಡಿಸಬೇಕೆಂಬ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಶಿಫಾರಸ್ಸಿಗೆ, ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಸಮ್ಮತಿ ಸೂಚಿಸಿದೆ. ಅಕ್ಟೋಬರ್‌ 1ರಿಂದಲೇ ಟಿ20ಯಲ್ಲಿ ಡಿಆರ್‌'ಎಸ್‌ ಜಾರಿಗೆ ಬರಲಿದೆ.

ಇನ್ನು ಔಟ್‌ ಆದ ಸಂದರ್ಭದಲ್ಲಿ ಆಟಗಾರರು ಡಿಆರ್‌'ಎಸ್‌ ಮೊರೆ ಹೋದಾಗ 3ನೇ ಅಂಪೈರ್‌, ಫೀಲ್ಡ್‌ ಅಂಪೈರ್‌ ತೀರ್ಮಾನಕ್ಕೆ ಬದ್ಧವಾದರೆ ತಂಡಗಳು ಮನವಿ ಕಳೆದುಕೊಳ್ಳುವುದು ಬೇಡ ಎಂಬ ಶಿಫಾರಸು ಹಾಗೂ ಬ್ಯಾಟ್‌ ಗಾತ್ರ, ರನೌಟ್‌, ಸ್ಟಂಪಿಂಗ್‌ ನಿಯಮ ಮತ್ತು ಅನುಚಿತವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಗೆ ಕಳಿಸುವ ಅಧಿಕಾರವನ್ನು ಅಂಪೈರ್‌'ಗಳಿಗೆ ನೀಡಲಾಗಿದೆ.

ಟೆಸ್ಟ್‌ನ 1 ಇನ್ನಿಂಗ್ಸ್‌'ನಲ್ಲಿ 80 ಓವರ್‌ ಆದ ಬಳಿಕ 2 ಹೆಚ್ಚುವರಿ ಮೇಲ್ಮನವಿ ಸಲ್ಲಿಸಲು 2013ರಲ್ಲಿ ಐಸಿಸಿ ಅನುಮತಿ ನೀಡಿತ್ತು. ಆದರೆ, ಇದೀಗ ಹೆಚ್ಚುವರಿಯಾಗಿ ನೀಡಿದ್ದ 2 ಮೇಲ್ಮನವಿಯನ್ನು ರದ್ದುಗೊಳಿಸಿದೆ.

ರೆಡ್ಕಾರ್ಡ್‌: ಇನ್ನು ಆಟಗಾರರು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದರೆ ಅಂಪೈರ್‌ ಕೆಂಪು ಕಾರ್ಡ್‌ ನೀಡಿ ಮೈದಾನದಿಂದ ಹೊರ ಹಾಕಬಹುದು.

ಬ್ಯಾಟ್ಗಾತ್ರಕ್ಕೆ ನಿರ್ಬಂಧ: ನೂತನ ಶಿಫಾರಸಿನ ಪ್ರಕಾರ ಬ್ಯಾಟ್‌ ಅಂಚುಗಳ ದಪ್ಪ 40 ಮಿಲಿ ಮೀಟರ್‌ ಹಾಗೂ ಬ್ಲೆಡ್‌'ನ ದಪ್ಪ 67 ಮಿಲಿ ಮೀಟರ್‌ ಮೀರಬಾರದು. ಸದ್ಯ ಹಲವರು 50 ಮಿ.ಮೀ ಗಾತ್ರದ ಬ್ಯಾಟ್‌'ಗಳನ್ನು ಬಳಕೆ ಮಾಡುತ್ತಿದ್ದಾರೆ.

ರನೌಟ್ನಿಯಮ ಬದಲು: ಇನ್ನು ರನೌಟ್‌ ಅಥವಾ ಸ್ಟಂಪ್‌ ಮಾಡುವ ಸಂದರ್ಭದಲ್ಲಿ ಬ್ಯಾಟ್ಸ್‌'ಮನ್‌ ಒಮ್ಮೆ ಕ್ರಿಸ್‌ನಲ್ಲಿ ಬ್ಯಾಟ್‌ ಇಟ್ಟಿದ್ದರೆ ಸಾಕು. ಬೇಲ್ಸ್‌ ಹಾರುವಾಗ ಬ್ಯಾಟ್‌ ಗಾಳಿಯಲ್ಲಿದ್ದರೂ ಔಟ್‌ ಎಂದು ನಿರ್ಧರಿಸುವಂತಿಲ್ಲ. 

click me!