
ದುಬೈ(ಸೆ.22): ಪ್ರತಿ ವರ್ಷ ಐಸಿಸಿ ಕೊಡುವ ಟೆಸ್ಟ್ ಚಾಂಪಿಯನ್ ಪಟ್ಟ ಈ ಬಾರಿ ಕೊಂಚದರಲ್ಲಿ ಭಾರತದ ಕೈ ಜಾರಿದ್ದು ಈ ಹಿನ್ನಲೆಯಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ರಾಜ ದಂಡ ಈ ಸಲ ಪಾಕ್ ಪಾಲಾಗಿದೆ.
ಕೊಹ್ಲಿ ಹೆಗಲು ಏರ ಬೇಕಿದ್ದ 'ಗದೆ' ಪಾಕಿಸ್ತಾನದ ಕೈಸೇರಿದೆ. ಇದೇ ಮೊದಲ ಭಾರಿಗೆ ಪಾಕಿಸ್ತಾನಕ್ಕೆ ಈ ಗೌರವ ಸಿಕ್ಕಿದ್ದು, ಟೆಸ್ಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ರಾಜ ದಂಡವನ್ನು ಸ್ವೀಕರಿಸಿದ್ದಾರೆ.
ಪ್ರತಿ ವರ್ಷವೂ ನಂಬರ್ ಈ ಸಮಯಕ್ಕೆ ಟೆಸ್ಟ್ನಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸುವ ತಂಡಕ್ಕೆ ಟೆಸ್ಟ್ ಚಾಂಪಿಯನ್ಷಿಪ್ ದಂಡವನ್ನು ನೀಡುತ್ತಾ ಬಂದಿದೆ. ಕೆಲವೇ ದಿನಗಳ ಹಿಂದೆ ನಂಬರ್ 1 ಪಟ್ಟ ಅಲಂಕರಿಸಿದ್ದ ಪಾಕ್ಗೆ ಈ ಗೌರವ ಸಿಕ್ಕಿದೆ.
ಭಾರತ ತಂಡ ಮಳೆಯ ಕಾರಣದಿಂದ ವೆಸ್ಟ್ ಇಂಡಿಸ್ ವಿರುದ್ಧ ಕೊನೆಯ ಪಂದ್ಯದವನ್ನು ಡ್ರಾ ಮಾಡಿಕೊಂಡ ಪರಿಣಾಮ ಮೊದಲ ಸ್ಥಾನದಿಂದ ಕೆಳಗೆ ಇಳಿಯ ಬೇಕಾಯಿತು. ಇನ್ನು ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಗೆದ್ದು ಮೊದಲ ಸ್ಥಾನ ಅಲಂಕರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.