
ಬೆಂಗಳೂರು(ಜು.24): ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಇಂಗ್ಲೆಂಡ್ ಗೆಲುವಿನೊಂದಿಗೆ ಮುಕ್ತಾಯವಾಗಿದೆ. ಇದೀಗ ಐಸಿಸಿ ತನ್ನ ಕನಸಿನ ತಂಡವನ್ನು ಪ್ರಕಟಿಸಿದ್ದು ಭಾರತ ತಂಡದ ಯಶಸ್ವಿ ನಾಯಕಿ ಮಿಥಾಲಿ ರಾಜ್ ತಂಡವನ್ನು ಮುನ್ನಡೆಸಲಿದ್ದಾರೆ.
ಹೌದು ಐಸಿಸಿ ಕನಸಿನ ತಂಡದ ನಾಯಕಿಯಾಗಿ ಮಿಥಾಲಿ ರಾಜ್ ನೇಮಕವಾಗಿದ್ದಾರೆ. ಇದಷ್ಟೇ ಅಲ್ಲದೇ ಭಾರತ ತಂಡದ ಉಪನಾಯಕಿಯಾಗಿರುವ ಹರ್ಮನ್'ಪ್ರೀತ್ ಕೌರ್ ಕೂಡಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಲಿಷ್ಟ ಆಸ್ಟ್ರೇಲಿಯಾ ಎದುರು ಅಜೇಯ 171 ರನ್ ಸಿಡಿಸಿದ್ದ ಕೌರ್ ಭಾರತ ತಂಡ ಫೈನಲ್ ಹಂತ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇನ್ನು ಭಾರತದ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ ಕೂಡಾ ಐಸಿಸಿ ಡ್ರೀಮ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದೀಪ್ತಿ ವಿಶ್ವಕಪ್ ಟೂರ್ನಿಯಲ್ಲಿ 112 ರನ್ ಹಾಗೂ 12 ವಿಕೆಟ್ ಪಡೆದು ಗಮನ ಸೆಳೆದಿದ್ದರು.
ಐಸಿಸಿ ಕನಸಿನ ತಂಡದಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದ 4 ತಂಡಗಳಾದ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಟ ರನ್ ಸಿಡಿಸಿದ್ದ ಎಲಿಸಾ ಫೆರ್ರಿ(404 ರನ್ ಹಾಗೂ 9 ವಿಕೆಟ್) ಐಸಿಸಿ ಡ್ರೀಮ್ ತಂಡದಲ್ಲಿ ಸ್ಥಾನಪಡೆದ ಏಕೈಕ ಆಸ್ಟ್ರೇಲಿಯಾದ ಆಟಗಾರ್ತಿಯೆನಿಸಿದ್ದಾರೆ.
ಐಸಿಸಿ ಕನಸಿನ ತಂಡ ಹೀಗಿದೆ:
ಮಿಥಾಲಿ ರಾಜ್(ನಾಯಕಿ)(IND), ತಮ್'ಸಿನ್ ಬೀಮೌಂಟ್(ENG), ಲೌರಾ ವೋಲ್ವಾರ್ಟ್(SA), ಎಲಿಸಾ ಫೆರ್ರಿ(AUS), ಸಾರಾ ಟೇಲರ್(ವಿಕೆಟ್ ಕೀಪರ್)(ENG), ಹರ್ಮನ್'ಪ್ರೀತ್ ಕೌರ್(IND), ದೀಪ್ತಿ ಶರ್ಮಾ(IND), ಮ್ಯಾರಿಜೇನ್ ಕ್ಯಾಫ್(SA), ಡ್ಯಾನ್ ವ್ಯಾನ್ ನೈಕ್ರೇಕ್(SA), ಅನ್ಯಾ ಶೃಭ್'ಸೋಲೆ(ENG), ಅಲೆಕ್ಸ್ ಹಾರ್ಟ್ಲಿ(ENG), ನಥಾಲಿ ಸ್ಕೀವರ್(12ನೇ ಆಟಗಾರ್ತಿ)(ENG).
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.