ಮುರಳೀಧರನ್'ಗೆ ಹಾಲ್ ಆಫ್ ಫೇಮ್ ಗೌರವ

By Suvarna Web DeskFirst Published Apr 19, 2017, 4:45 PM IST
Highlights

ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಬರೆದಿರುವ ಮುರುಳಿ, ಹಾಲ್ ಆಫ್ ಫೇಮ್ ಗೌರವ ಪಡೆಯುತ್ತಿರುವ ಶ್ರೀಲಂಕಾದ ಮೊದಲ ಆಟಗಾರ ಎನಿಸಲಿದ್ದಾರೆ.

ಕೊಲಂಬೊ(ಏ.19): ಶ್ರೀಲಂಕಾದ ಮಾಜಿ ಆಫ್'ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನವಾಗಿದ್ದಾರೆ.

ಮುಂದಿನ ತಿಂಗಳು ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ವೇಳೆ ಈ ಸ್ಪಿನ್ ಮಾಂತ್ರಿಕನಿಗೆ ಹಾಲ್ ಆಫ್ ಫೇಮ್ ಗೌರವ ಪ್ರದಾನವಾಗಲಿದೆ. ‘‘ಕ್ರಿಕೆಟ್ ಜಗತ್ತು ಕಂಡ ಸ್ಪಿನ್ ದಂತಕತೆ ಮುರಳೀಧರನ್ ಈ ಪ್ರತಿಷ್ಠಿತ ಗೌರವಕ್ಕೆ ಭಾಜನವಾಗುತ್ತಿರುವುದು ಶ್ರೀಲಂಕಾ ಕ್ರಿಕೆಟ್ ಪಾಲಿಗೆ ಹೆಮ್ಮೆಯ ಸಂಗತಿ. ಅವರ ಅಪ್ರತಿಮ ಸಾಧನೆಗೆ ಸಂದ ಬಳುವಳಿ ಇದಾಗಿದೆ’’ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶ್ಲೆ ಡಿ ಸಿಲ್ವಾ ಹೇಳಿದ್ದಾರೆ.

ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಬರೆದಿರುವ ಮುರುಳಿ, ಹಾಲ್ ಆಫ್ ಫೇಮ್ ಗೌರವ ಪಡೆಯುತ್ತಿರುವ ಶ್ರೀಲಂಕಾದ ಮೊದಲ ಆಟಗಾರ ಎನಿಸಲಿದ್ದಾರೆ. ಮುತ್ತಯ್ಯ ಮುರಳೀಧರನ್ 133 ಟೆಸ್ಟ್ ಪಂದ್ಯಗಳನ್ನಾಡಿದ್ದು 800 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಪಂದ್ಯದಲ್ಲೂ ಕಮಾಲ್ ಮಾಡಿರುವ ದೂಸ್ರಾ ಸ್ಪೆಷಲಿಷ್ಟ್ 350 ಪಂದ್ಯಗಳಲ್ಲಿ 534 ವಿಕೆಟ್ ಕಿತ್ತಿದ್ದಾರೆ.

 

click me!