ಪ್ರಣಯ್'ಗೆ ಒಲಿದ ಯುಎಸ್ ಓಪನ್ ಕಿರೀಟ

By Suvarna Web DeskFirst Published Jul 24, 2017, 6:41 PM IST
Highlights

21 ತಿಂಗಳುಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಪ್ರಶಸ್ತಿ ಗೆಲ್ಲುವಲ್ಲಿ ಮತ್ತೊಮ್ಮೆ ವಿಫಲರಾದರು.

ಯುಎಸ್'ಎ(ಜು.24): ಭಾರತದ ಯುವ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್ ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸುಮಾರು 1 ಗಂಟೆ 5 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ತಮ್ಮದೇಶದವರೇ ಆದ ಕಾಮನ್‌'ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಅವರನ್ನು 21-15, 20-22, 21-12 ಗೇಮ್‌'ಗಳಿಂದ ಮಣಿಸುವ ಮೂಲಕ ಎಚ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರು.

ಪಂದ್ಯದ ಆರಂಭದಿಂದಲೂ ಆಕ್ರಮಣಾಕಾರಿ ಆಟಕ್ಕೆ ಮುಂದಾಗಿದ್ದ ಕಶ್ಯಪ್, ಒಂದು ಹಂತದಲ್ಲಿ 7-1 ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಆನಂತರ ಕಶ್ಯಪ್ ಮಾಡಿಕೊಂಡ ಎಡವಟ್ಟಿನಿಂದ ಮೊದಲ ಸೆಟ್ ಕೈಚೆಲ್ಲಿದರು. ಮುಂದಿನ ಎರಡನೇ ಸೆಟ್ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಈ ವೇಳೆ ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದುಕೊಂಡ ಕಶ್ಯಪ್ 22-20 ಅಂಕಗಳಿಂದ ಸೆಟ್ ತಮ್ಮದಾಗಿಸಿಕೊಂಡರು. ಮೂರನೇ ಹಾಗೂ ನಿರ್ಣಾಯಕ ಸೆಟ್'ನಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾದ ಪ್ರಣಯ್ ಸುಲಭವಾಗಿ ಸೆಟ್ ಪಾಯಿಂಟ್ ಗೆಲ್ಲುವ ಮೂಲಕ ಚೊಚ್ಚಲ ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಗೆಲ್ಲುವಲ್ಲಿ ಸಫಲರಾದರು. ಈ ಹಿಂದೆ 2014 ರಲ್ಲಿ ಪ್ರಣಯ್, ಚೊಚ್ಚಲ ಬಾರಿಗೆ ಇಂಡೋನೇಷ್ಯಾ ಗ್ರ್ಯಾನ್ ಪ್ರೀ ಗೋಲ್ಡ್ ಟ್ರೋಫಿ ಗೆದ್ದುಕೊಂಡಿದ್ದರು.

21 ತಿಂಗಳುಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಪ್ರಶಸ್ತಿ ಗೆಲ್ಲುವಲ್ಲಿ ಮತ್ತೊಮ್ಮೆ ವಿಫಲರಾದರು.

click me!