
ನವದೆಹಲಿ(ಜು.24): ಭಾರತ ತಂಡದ ಆರಂಭಿಕ ಬ್ಯಾಟ್ಸ್'ಮೆನ್ ಕೆ.ಎಲ್. ರಾಹುಲ್ ಶ್ರೀಲಂಕಾ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಜುಲೈ.26ರಂದು ಗಾಲೆಯ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ.
ಜ್ವರವಿರುವ ಕಾರಣ ಆಟವಾಡದಂತೆ ವೈದ್ಯಕೀಯ ತಂಡ ಸಲಹೆ ನೀಡಿರುವ ಕಾರಣ ಮೊದಲ ಟೆಸ್ಟ್'ನಲ್ಲಿ ಬ್ಯಾಟ್ ಮಾಡುವುದಿಲ್ಲ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಮೊಣಕೈ ಸಮಸ್ಯೆಯಿಂದ ಈಗಾಗಲೇ ಪ್ರಮುಖ ಆಟಗಾರ ಮುರುಳಿ ವಿಜಯ್ ಕೂಡ ಟೆಸ್ಟ್ ಸರಣಿಯಿಂದ ದೂರವುಳಿದಿದ್ದು, ಬದಲಿಗೆ ಶಿಖರ್ ಧವನ್ ಆರಂಭಿಕ ಬ್ಯಾಟ್ಸ್'ಮೆನ್ ಆಗಿ ಕಣಕ್ಕಿಳಿಯುತ್ತಿದ್ದಾರೆ.
ಬ್ಯಾಟ್ ಬಿಟ್ಟು ಹೆಚ್ಚು ಸಮಯ ಕಾಲಕಳೆಯುದಕ್ಕೆ ಸಾಧ್ಯವಾಗುವುದಿಲ್ಲ. ಆರೋಗ್ಯ ಸಮಸ್ಯೆಗಳಿಂದಾಗಿ ಹಲವು ದಿನಗಳಿಂದ ತಂಡದಿಂದ ದೂರವುಳಿದಿದ್ದೆ. ಆದಷ್ಟು ಬೇಗನೆ ಚೇತರಿಸಿಕೊಂಡು ಮೈದಾನದಲ್ಲಿ ಕಾಣಿಸಿಕೊಳ್ಳೆತ್ತೇನೆ ಎಂದು' ರಾಹುಲ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.