ಗೇಲ್ ಖರೀದಿ ರಹಸ್ಯ ಬಿಚ್ಚಿಟ್ಟ ನೆಸ್ ವಾಡಿಯಾ; ಗೇಲ್’ರನ್ನು ಕೊನೆಗೂ ಖರೀದಿಸಿದ್ದು ಹೇಗೆ..?

First Published Apr 28, 2018, 11:28 AM IST
Highlights

ಈಗಾಗಲೇ ಗೇಲ್ 2 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗೇಲ್ ಹಾಗೂ ಯುವರಾಜ್ ಸಿಂಗ್ ಒಂದೆರಡು ಪಂದ್ಯಗಳನ್ನು ಗೆಲ್ಲಿಸಿಕೊಟ್ಟರೂ ಅವರ ಮೇಲೆ ಹೂಡಿದ ಹಣಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನವದೆಹಲಿ[ಏ.28]: ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ, ಐಪಿಎಲ್ ಆಟಗಾರರ ಹರಾಜಿನಲ್ಲಿ ಕ್ರಿಸ್ ಗೇಲ್ ಖರೀದಿ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಗೇಲ್ ಎರಡು ಬಾರಿ ಬಿಕರಿಯಾಗದೆ ಉಳಿದಿದ್ದರು, ಬಳಿಕ 3ನೇ ಬಾರಿ ಅವರ ಮೂಲ ಬೆಲೆ ₹2 ಕೋಟಿಗೆ ಪಂಜಾಬ್ ಖರೀದಿಸಿತ್ತು.
‘ನಮ್ಮಲ್ಲಿ ಉಳಿದಿದ್ದು ಕೇವಲ ₹2.1 ಕೋಟಿ ಮಾತ್ರ. 2ನೇ ಅವಕಾಶದಲ್ಲಿ ಬಿಡ್ ಸಲ್ಲಿಸಿದ್ದರೆ ಬೇರೆ ತಂಡ ಹೆಚ್ಚಿನ ಮೊತ್ತ ಕೂಗುತ್ತಿತ್ತು. ಹೀಗಾಗಿ ಕೊನೆವರೆಗೂ ಕಾಯ್ದು ಗೇಲ್‌’ರನ್ನು ಖರೀದಿಸಿದೆವು’ ಎಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಗೇಲ್ ಅವರನ್ನು ಯಾವೊಬ್ಬ ಪ್ರಾಂಚೖಸಿಯೂ ಖರೀದಿಸಿರಲಿಲ್ಲ. ಮೂರನೇ ಸುತ್ತಿನ ಹರಾಜಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್’ನ ಮೆಂಟರ್ ವಿರೇಂದ್ರ ಸೆಹ್ವಾಗ್ ಅವರು ಗೇಲ್ ಖರೀದಿಸುವ ಮನಸು ಮಾಡಿದ್ದರು.

click me!