ಹಾಂಕಾಂಗ್ ಮಾಜಿ ನಾಯಕ ಭಾರತಕ್ಕೆ; ಹೊಸ ಕರಿಯರ್ ಆರಂಭಕ್ಕೆ ಸಿದ್ಧತೆ!

By Web DeskFirst Published Sep 13, 2019, 4:06 PM IST
Highlights

ಹಾಂಕಾಂಗ್ ತಂಡದ ಕ್ರಿಕೆಟಿಗ, ಮಾಜಿ ನಾಯಕ ಇದೀಗ ಭಾರತದಲ್ಲಿ ಕ್ರಿಕೆಟ್ ಕರಿಯರ್ ಆರಂಭಿಸಲು ಸಜ್ಜಾಗಿದ್ದಾರೆ. ಹಾಂಕಾಂಗ್ ತೊರೆದು ಭಾರತಕ್ಕೆ ಮರಳಿರುವ ಹಾಂಕಾಂಗ್ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿ ಮಿಂಚುವ ಗುರಿ ಇಟ್ಟುಕೊಂಡಿದ್ದಾರೆ. ಹಾಂಕಾಗ್‌ಗೆ ಗುಡ್ ಬೈ ಹೇಳಿ ಭಾರತಕ್ಕೆ ಆಗಮಿಸಿರುವ ಯುವ ಕ್ರಿಕೆಟಿಗನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ವಿದರ್ಭ(ಸೆ.13): ಭಾರತದ ಮೂಲದ ಅಂಶುಮಾನ್ ರಾಥ್, ಹಾಂಕಾಂಗ್ ಕ್ರಿಕೆಟ್ ತಂಡದ ನಾಯಕನಾಗಿ ವಿಶ್ವದ ಗಮನಸೆಳೆದಿದ್ದರು. 2018ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ   96 ಎಸೆತದಲ್ಲಿ 73 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಪ್ರದರ್ಶನ ಅಂಶುಮಾನ್ ರಾಥ್ ಕರಿಯರ್‌ಗೆ ಹೊಸ ತಿರುವು ನೀಡಿತು. ಬಳಿಕ ನಾಯಕತ್ವದಿಂದ ಕೆಳಗಿಳಿದ ಅಂಶುಮಾನ್ ಇದೀಗ ಭಾರತದಲ್ಲಿ ಕ್ರಿಕೆಟ್ ಕರಿಯರ್ ಆರಂಭಿಸಲು ಸಿದ್ದತೆ ನಡೆಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಶಾ ಮಾತುಕತೆ; ಟ್ರೋಲ್ ಆದ ಅನುಷ್ಕಾ!

2020ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಹಾಂಕ್ ಕಾಂಗ್ ಪಾಲ್ಗೊಳ್ಳುತ್ತಿದೆ. ಈ ಟೂರ್ನಿಗೆ ಹಾಂಕ್ ಕಾಂಗ್ ತಯಾರಿ ನಡೆಸುತ್ತಿದೆ. ಆದರೆ ಅಂಶುಮಾನ್ ರಾಥ್‌ಗೆ ಸ್ಥಾನ ಸಿಕ್ಕಿಲ್ಲ. ಒಡಿಶಾದಲ್ಲಿ ಹುಟ್ಟಿ ಹಾಂಕ್ ಕಾಂಗ್‌ನಲ್ಲಿ  ಕ್ರಿಕೆಟ್ ಕರಿಯರ್ ಆರಂಭಿಸಿದ ಅಂಶುಮಾನ್ ಇದೀಗ ವಿದರ್ಭ ತಂಡದ ಪರ ಆಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

ಅಂಶುಮಾನ್ ಮನವಿಯನ್ನು ವಿದರ್ಭ ಕ್ರಿಕೆಟ್ ಸ್ವೀಕರಿಸಿದೆ. ಕ್ಲಬ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅಂಶುಮಾನ್‌ಗೆ ವಿದರ್ಭ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದಿದೆ. ವೇದಿಕೆ ರೆಡಿ ಇದೆ. ಸದ್ಯ ನಾನು ಉತ್ತಮ ಪ್ರದರ್ಶನ ನೀಡಿ ವಿದರ್ಭ ತಂಡಕ್ಕೆ ಆಯ್ಕೆಯಾಗೋ ವಿಶ್ವಾಸದಲ್ಲಿದ್ದೇನೆ ಎಂದು ಅಂಶುಮಾನ್ ರಾಥ್ ಹೇಳಿದ್ದಾರೆ.
 

click me!