ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಹಾಕಿ ತಂಡ ಶುಭಾರಂಭ ಮಾಡಿದೆ. ಬೀರೇಂದ್ರ ಲಾಕ್ರಾ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಗೋಲು ಸಿಡಿಸೋ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಪರ್ತ್(ಮೇ.09): ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಭಾರತ ಪುರುಷರ ಹಾಕಿ ತಂಡ ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಪಶ್ಚಿಮ ಆಸ್ಪ್ರೇಲಿಯಾ ಥಂಡರ್‌ಸ್ಟಿಕ್ಸ್ ತಂಡದ ವಿರುದ್ಧ 2-0 ಗೋಲುಗಳಿಂದ ಜಯಗಳಿಸುವ ಮೂಲಕ ಶುಭಾರಂಭ ಮಾಡಿದೆ.
FT: WA 0-2 IND
An errorless performance in all the departments saw Team India 🇮🇳 home as they win the tour opener comfortably. pic.twitter.com/Fa6dW0BJ4E
ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರ ಬೀರೇಂದ್ರ ಲಾಕ್ರಾ (23ನೇ ನಿ.) ಹಾಗೂ ಹರ್ಮನ್‌ಪ್ರೀತ್ ಸಿಂಗ್ (50ನೇ ನಿ.) ಗೋಲು ಬಾರಿಸಿದರು. ಭಾರತ ತಂಡ ಆಸ್ಪ್ರೇಲಿಯಾ ರಾಷ್ಟ್ರೀಯ ತಂಡದ ವಿರುದ್ಧ ಮೇ 15 ಹಾಗೂ 17ರಂದು ಪಂದ್ಯಗಳನ್ನು ಆಡಲಿದ್ದು, ಆ ಸರಣಿಗೆ ಪೂರ್ವಭಾವಿ ತಯಾರಿ ನಡೆಸುತ್ತಿದೆ. ಈ ಸರಣಿಗೂ ಮುನ್ನ ಮೇ 10ರಂದು ಆಸ್ಪ್ರೇಲಿಯಾ ‘ಎ’ ವಿರುದ್ಧ ಪಂದ್ಯವನ್ನು ಆಡಲಿದೆ.
A strike each from Defenders Birendra Lakra and Harmanpreet Singh saw the Indian Men's Hockey Team secure a comfortable 2-0 win over WA Thundersticks at the Perth Hockey Stadium on 8th May 2019. Read more: https://t.co/Wae2OcAH5g pic.twitter.com/ENw4fm7HcE
— Hockey India (@TheHockeyIndia)