ಕ್ರಿಕೆಟಿಗರ ಸಂಸ್ಥೆ ನೋಂದಣಿ- ಇನ್ಮುಂದೆ ಬಿಸಿಸಿಐ ನಿರ್ಧಾರಗಳಲ್ಲಿ ಕ್ರಿಕೆಟಿಗರು ಭಾಗಿ!

By Web DeskFirst Published May 9, 2019, 9:17 AM IST
Highlights

ಬಿಸಿಸಿಐ ಪ್ರಮುಖ ನಿರ್ಧಾರಗಳಲ್ಲಿ ಇನ್ಮುಂದೆ ಕ್ರಿಕೆಟಿಗರು ಪಾಲುದಾರರಾಗಲಿದ್ದಾರೆ. ಇದಕ್ಕಾಗಿ  ಭಾರತೀಯ ಕ್ರಿಕೆಟಿಗರ ಸಂಸ್ಥೆ ನೋಂದಣಿಗೆ ಅರ್ಜಿ ಹಾಕಲಾಗಿದೆ. ನೂತನ ಕ್ರಿಕೆಟ್ ಸಂಸ್ಥೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮೇ.09): ಭಾರತೀಯ ಕ್ರಿಕೆಟಿಗರು ಸದ್ಯದಲ್ಲೇ ಬಿಸಿಸಿಐ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳಲ್ಲಿ ಪಾಲುದಾರರಾಗಲಿದ್ದಾರೆ. ಬಹುನಿರೀಕ್ಷಿತ ಆಟಗಾರರ ಸಂಸ್ಥೆ ಮುಂದಿನ 2 ವಾರಗಳಲ್ಲಿ ನೋಂದಣಿಯಾಗಲಿದೆ. ಆದರೆ ಸಂಸ್ಥೆ ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಂಸ್ಥೆ (ಎಫ್‌ಐಸಿಎ)ನ ಭಾಗವಾಗಿರುವುದಿಲ್ಲ. ಭಾರತೀಯ ಕ್ರಿಕೆಟಿಗರ ಸಂಸ್ಥೆ ಎನ್ನುವ ಹೆಸರಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಹೆಸರು ಲಭ್ಯವಿದೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ.

ಇದನ್ನೂ ಓದಿ: ಬಿಸಿಸಿಐ ಇತಿಹಾಸದಲ್ಲಿ ಇದೇ ಮೊದಲು - ವಾರ್ಷಿಕ ಸಮಾವೇಶಕ್ಕೆ ಮಹಿಳಾ ಕ್ರಿಕೆಟರ್ಸ್!

‘ಸಂಸ್ಥೆ ನೋಂದಣಿಯಾದ ಬಳಿಕ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ವಿವಿಧ ಜವಾಬ್ದಾರಿ ನೀಡಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ತಿಳಿಸಿದ್ದಾರೆ. ಈ ಮೂಲಕ ಬಿಸಿಸಿಐ ನಿರ್ಧಾರಗಳಲ್ಲಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಇದರಿಂದ ಭಾರತೀಯ ಕ್ರಿಕೆಟ್ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

click me!