ಡಿಡಿಸಿಎಗೆ ಚಾಟಿ ಬೀಸಿದ ಕೋರ್ಟ್

Published : Nov 07, 2016, 04:27 PM ISTUpdated : Apr 11, 2018, 12:59 PM IST
ಡಿಡಿಸಿಎಗೆ ಚಾಟಿ ಬೀಸಿದ ಕೋರ್ಟ್

ಸಾರಾಂಶ

ಮಾಜಿ ಕ್ರಿಕೆಟಿಗರಾದ ಮಣೀಂದರ್ ಸಿಂಗ್, ಅತುಲ್ ವಾಸನ್ ಮತ್ತು ನಿಖಿಲ್ ಚೋಪ್ರಾ ಅವರುಗಳನ್ನು ಆಯ್ಕೆಗಾರರನ್ನಾಗಿ ನ್ಯಾ. ಮುದ್ಗಲ್ ನೇಮಿಸಿದ್ದರು. ಆದರೆ, ನ.5ರಂದು ನಡೆದ ಡಿಡಿಸಿಎ ಕ್ರೀಡಾ ಕಾರ್ಯಕಾರಿ ಸಮಿತಿ ಸಭೆ ಈ ಮೂವರ ನೇಮಕವನ್ನೂ ವಜಾಗೊಳಿಸಿತ್ತು.

ನವದೆಹಲಿ(ನ.07): ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯಲ್ಲಿನ ಅವ್ಯವಹಾರದ ಹಿನ್ನೆಲೆಯಲ್ಲಿ ಅದರ ಕ್ರಿಕೆಟ್ ಚಟುವಟಿಕೆಯ ಮೇಲ್ವಿಚಾರಕರನ್ನಾಗಿ ತಾನು ನೇಮಿಸಿದ್ದ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ಅವರಿಂದ ನೇಮಕವಾಗಿದ್ದ ಆಯ್ಕೆಗಾರರನ್ನು ವಜಾಗೊಳಿಸಿದ ಡಿಡಿಸಿಎ ಕ್ರಮವನ್ನು ಕಟು ನುಡಿಗಳಲ್ಲಿ ಖಂಡಿಸಿರುವ ದೆಹಲಿ ಉಚ್ಚ ನ್ಯಾಯಾಲಯ, ಇದೀಗ ಆ ಆಯ್ಕೆಗಾರರನ್ನು ಅವರ ಸ್ಥಾನದಲ್ಲಿ ಮರುಸ್ಥಾಪಿಸುವಂತೆ ಆಜ್ಞಾಪಿಸಿದೆ.

ಮಾಜಿ ಕ್ರಿಕೆಟಿಗರಾದ ಮಣೀಂದರ್ ಸಿಂಗ್, ಅತುಲ್ ವಾಸನ್ ಮತ್ತು ನಿಖಿಲ್ ಚೋಪ್ರಾ ಅವರುಗಳನ್ನು ಆಯ್ಕೆಗಾರರನ್ನಾಗಿ ನ್ಯಾ. ಮುದ್ಗಲ್ ನೇಮಿಸಿದ್ದರು. ಆದರೆ, ನ.5ರಂದು ನಡೆದ ಡಿಡಿಸಿಎ ಕ್ರೀಡಾ ಕಾರ್ಯಕಾರಿ ಸಮಿತಿ ಸಭೆ ಈ ಮೂವರ ನೇಮಕವನ್ನೂ ವಜಾಗೊಳಿಸಿತ್ತು.

‘‘ಡಿಡಿಸಿಎ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರಿನ ಕುರಿತಾಗಿ ಇನ್ನೂ ಅಂತಿಮ ಆದೇಶ ಹೊರಬೀಳಬೇಕಿದೆ. ಇಷ್ಟಾದರೂ ಅದು ನ್ಯಾಯಾಲಯದಿಂದ ನೇಮಕವಾಗಿರುವ ನ್ಯಾ. ಮೂರ್ತಿಗಳ ನಿರ್ಣಯವನ್ನೇ ಧಿಕ್ಕರಿಸಹೊರಟಿರುವುದು ಒಂದು ವಿಧದಲ್ಲಿ ಮುದ್ಗಲ್ ಅವರನ್ನೇ ಗುರಿಯಾಗಿಸಿಕೊಂಡಂತಿದೆ. ಡಿಡಿಸಿಎ ನಡೆ ನಿಸ್ಸಂಶಯವಾಗಿ ನ್ಯಾಯಾಂಗ ನಿಂದನೆಯಾಗಿದೆ. ಆಯ್ಕೆಗಾರರನ್ನೇ ವಜಾಗೊಳಿಸುವಂಥ ಮಹತ್ವದ ನಿರ್ಧಾರ ತಳೆಯುವ ಮುನ್ನ ನ್ಯಾಯಾಲಯದ ಗಮನಕ್ಕೆ ಇದನ್ನು ತರಬೇಕಿತ್ತು. ಅದಾವುದನ್ನೂ ಮಾಡದೆ ಉದ್ಧಟತನದಿಂದ ವರ್ತಿಸಿರುವುದನ್ನು ನ್ಯಾಯಾಲಯ ಸಹಿಸದು’’ ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ದೀಪಾ ಶರ್ಮ ಅವರಿದ್ದ ದ್ವಿಸದಸ್ಯ ಪೀಠ ಡಿಡಿಸಿಎಯನ್ನು ತರಾಟೆಗೆ ತೆಗೆದುಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ಸಕ್ರಿಯ ಅಟಗಾರ
ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!