
ಕೋಲ್ಕತ್ತಾ(ಆ.02): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಯಶಸ್ಸನ್ನ ಸಂಭ್ರಮಿಸೋ ಮೊದಲೇ ಮೊಹಮ್ಮದ್ ಶಮಿಗೆ ಮತ್ತೊಂದು ಆಘಾತ ಎದುರಾಗಿದೆ. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಜಗಳ ತಾರಕಕ್ಕೇರಿದೆ. ಶಮಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಹಸಿನ್ ಜಹಾನ್ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಬಾರಿ ಶಮಿ ನಿಜಕ್ಕೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.
ಮೊಹಮ್ಮದ್ ಶಮಿ ನೈಜ ವಯಸ್ಸನ್ನ ಮರೆಮಾಚಿ ನಕಲಿ ಸರ್ಟಿಫಿಕೆಟ್ ನೀಡಿದ್ದಾರೆ ಎಂದು ಪತ್ನಿ ಹಸಿನ್ ಜಹಾನ್ ಆರೋಪಿಸಿದ್ದಾರೆ. ಬಿಸಿಸಿಐಗೆ ನೀಡಿದ ದಾಖಲೆಗಳಲ್ಲಿ ಶಮಿ 1990ರಲ್ಲಿ ಹುಟ್ಟಿದ ದಿನಾಂಕವಿದೆ. ಆದರೆ ಪತ್ನಿ ಇದೀಗ ಎಸ್ಎಸ್ಎಲ್‌ಸಿ ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ಮತದಾರ ಚೀಟಿಗಳಲ್ಲಿ ಫೋಟೋವನ್ನ ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಪತ್ನಿ ಅಪ್‌ಲೋಡ್ ಮಾಡಿರೋ ಮೊಹಮ್ಮದ್ ಶಮಿಯ ಎಸ್ಎಸ್ಎಲ್‌ಸಿ ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ಮತದಾರ ಚೀಟಿಗಳಲ್ಲಿ ಜನ್ಮ ದಿನಾಂಕ ಬೇರೆ ಬೇರೆಯಾಗಿದೆ. ಬಿಸಿಸಿಐ ಪ್ರಕಾರ ಶಮಿ ವಯಸ್ಸು 28, ಆದರೆ ಎಸ್ಎಸ್ಎಲ್‌ಸಿ ಅಂಕಪಟ್ಟಿ ಪ್ರಕಾರ ಶಮಿ ವಯಸ್ಸು 34, ಡ್ರೈವಿಂಗ್ ಲೈಸೆನ್ಸ್ ಪ್ರಕಾರ ಶಮಿ ವಯಸ್ಸು 36. ಹೀಗಾಗಿ ಈ ಬಾರಿ ಶಮಿ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಶಮಿ ಬೇರೆ ಯುವತಿ ಜೊತೆ ರಹಸ್ಯ ಮದುವೆಯಾಗಿದ್ದಾರೆ ಅನ್ನೋ ಆರೋಪದಿಂದ ಆರಂಭದಗೊಂಡ ಜಗಳ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಂಡಿತ್ತು. ಮಾನಸಿಕ ಹಿಂಸೆ, ದೈಹಿಕ ಹಿಂಸೆ ಸೇರಿದಂತೆ ಶಮಿ ವಿರುದ್ಧ ಹಲವು ಪ್ರಕರಣ ದಾಖಲಿಸಿದ ಶಮಿ ಪತ್ನಿ ಹಸಿನ್ ಜಹಾನ್ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ನಕಲಿ ಪ್ರಮಾಣ ಪತ್ರ ನೀಡೋ ಮೂಲಕ ವಯಸ್ಸಿನ ಅಂತರ ಕಡಿಮೆ ತೋರಿಸಿ ತಂಡ ಸೇರಿಕೊಳ್ಳುವವರ ವಿರುದ್ಧ ಬಿಸಿಸಿಐ ಹಾಗೂ ಐಸಿಸಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಇದರ ಬೆನ್ನಲ್ಲೇ, ಶಮಿ ವಯಸ್ಸಿನ ಆರೋಪ ಸಾಬೀತಾದಲ್ಲಿ, ಟೀಂ ಇಂಡಿಯಾ ವೇಗಿಯ ಕರಿಯರ್ ಅಂತ್ಯಗೊಳಿಸುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.