ಟೆಸ್ಟ್' ಕ್ರಿಕೆಟ್ ಇತಿಹಾಸದಲ್ಲಿ 70 ಸಾವಿರ ವಿಕೇಟ್ ಆಗಿ ಔಟಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್'ಮೆನ್

By Suvarna Web DeskFirst Published Sep 29, 2017, 5:36 PM IST
Highlights

ಕಳೆದ 2 ದಿನಗಳಿಂದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ನಡುವೆ 4546ನೇ ಟೆಸ್ಟ್ ನಡೆಯುತ್ತಿದೆ

ಪೊಟ್ಚೆಸ್ಟ್ಸ್ಟ್ರೂಮ್(ಸೆ.29): ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. 1877 ಮಾರ್ಚ್ 15ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್'ನಲ್ಲಿ ಇಂಗ್ಲೆಂಡ್ ಹಾಗೂ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಕ್ರಿಕೆಟ್ ಆರಂಭವಾದಗಿನಿಂದ ಇಲ್ಲಿಯವರೆಗೂ 140 ವರ್ಷಗಳ ಇತಿಹಾಸದಲ್ಲಿ ಒಂದು ವಿಶ್ವ ಇಲೆವೆನ್ ಪಂದ್ಯವೂ ಸೇರಿದಂತೆ 10 ತಂಡಗಳಿಂದ ಒಟ್ಟು 4546 ಟೆಸ್ಟ್ ಪಂದ್ಯಗಳು ನಡೆದಿವೆ.

ಕಳೆದ 2 ದಿನಗಳಿಂದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ನಡುವೆ 4546ನೇ ಟೆಸ್ಟ್ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್'ಮೆನ್ ಹಶಿಮ್ ಆಮ್ಲಾ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಂ ಎಸೆತದಲ್ಲಿ ಮೆಹಿದ್ ಹಸನ್ ಮಿರಾಜ್ ಅವರಿಗೆ ಕ್ಯಾಚಿತ್ತು 137 ರನ್ನಿಗೆ ಔಟಾಗುವ ಮೂಲಕ 70 ಸಾವಿರ ವಿಕೇಟ್ ಆಗಿ ಬಲಿಯಾಗಿ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.

ಈ ವಿಕೇಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸವಾಗಿದೆ. ಟೆಸ್ಟ್ ಕ್ರಿಕೆಟ್'ನಲ್ಲಿ ಇಂಗ್ಲೆಂಡ್(989) ಮತ್ತು ಆಸ್ಟ್ರೇಲಿಯಾ(803)  ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ರಾಷ್ಟ್ರಗಳಾಗಿವೆ. ಮುಂದಿನ 3 ಮತ್ತು 4ನೇ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್(525) ಹಾಗೂ ಭಾರತ(515) ತಂಡಗಳಿವೆ. 1877 ಮಾರ್ಚ್ 15ರಂದು ಟೆಸ್ಟ್ ಕ್ರಿಕೆಟ್ ಆರಂಭವಾದರೂ ಭಾರತ ಆಡಿದ್ದು 55 ವರ್ಷಗಳ ನಂತರ 1932ರಲ್ಲಿ. ನಾಯಕ ಸಿಕೆ ನಾಯ್ಡು ನೇತೃತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ 158 ರನ್'ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು.       

    

click me!