
ಪೋರ್ಟ್ ಎಲೆಜಿಬೆತ್(ಜ.21): ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆಯನ್ನು ದ.ಆಫ್ರಿಕಾದ ಬ್ಯಾಟಿಂಗ್ ತಾರೆ ಹಾಶೀಂ ಆಮ್ಲಾ ಮುರಿದಿದ್ದಾರೆ.
ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 108 ರನ್ ಗಳಿಸಿದ ಆಮ್ಲಾ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 27 ಶತಕ ಬಾರಿಸಿದ ದಾಖಲೆ ಬರೆದರು. ಕೊಹ್ಲಿ ಈ ಸಾಧನೆ ಮಾಡಲು 169 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದು. ಆದರೆ ಆಮ್ಲಾ 167 ಇನ್ನಿಂಗ್ಸ್‌ಗಳಲ್ಲೇ 27 ಶತಕ ಪೂರೈಸಿದ್ದಾರೆ. ಕೊಹ್ಲಿಗೂ ಮುನ್ನ ಸಚಿನ್ ತೆಂಡುಲ್ಕರ್ ಹೆಸರಲ್ಲಿ ದಾಖಲೆ ಇತ್ತು. ಸಚಿನ್ 254 ಇನ್ನಿಂಗ್ಸ್‌ಗಳಲ್ಲಿ 27ನೇ ಶತಕದ ಮೈಲಿಗಲ್ಲು ತಲುಪಿದ್ದರು.
ಬರೋಬ್ಬರಿ 15 ತಿಂಗಳ ಬಳಿಕ ಶತಕ ಸಿಡಿಸಿದ ಆಮ್ಲಾ ಹೋರಾಟ ಇದೇ ಮೊದಲ ಬಾರಿಗೆ ವ್ಯರ್ಥವಾಯಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0 ಮುನ್ನಡೆ ಕಾಯ್ದುಕೊಂಡಿದೆ. ಇದೇ ಮೊದಲ ಬಾರಿಗೆ ಆಮ್ಲಾ ಶತಕ ಸಿಡಿಸಿದ ಏಕದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ಸೋತಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.