
ಸಿಡ್ನಿ(ಜು.03): ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹಾಗೂ ಕ್ರಿಕೆಟಿಗರ ನಡುವಿನ ವೇತನ ಬಿಕ್ಕಟ್ಟು ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಆಟಗಾರರು ಹಾಗೂ ಆಡಳಿತ ಮಂಡಳಿ ನಡುವಿನ ಮನಸ್ತಾಪ ಹೆಚ್ಚಾಗುತ್ತಿದೆ.
ಆಸೀಸ್ ಕ್ರಿಕೆಟ್ ಮಂಡಳಿ ನೂತನ ಗುತ್ತಿಗೆ ಪದ್ದತಿಗೆ ಸಹಿ ಹಾಕಲು ನೀಡಿದ್ದ ಗಡುವಿನೊಳಗೆ ಆಸೀಸ್ ಆಟಗಾರರು ಸಹಿ ಹಾಕದ ಹಿನ್ನಲೆಯಲ್ಲಿ ಸುಮಾರು 230ಕ್ಕೂ ಹೆಚ್ಚು ಆಸೀಸ್ ಆಟಗಾರರು ಇದೀಗ ನಿರುದ್ಯೋಗಿಗಳಾಗಿದ್ದಾರೆ.
ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್'ಮನ್ ಆರೋನ್ ಫಿಂಚ್, ಕ್ರಿಕೆಟ್ ಆಸ್ಟ್ರೇಲಿಯಾವನ್ನು ಅಣಕಿಸಿದ್ದಾರೆ.
ಸದ್ಯ ಆರೋನ್ ಫಿಂಚ್, ನ್ಯಾಟ್'ವೆಸ್ಟ್ ಟಿ20ಯಲ್ಲಿ ಭಾಗವಹಿಸಲು ಇಂಗ್ಲೆಂಡ್ ತೆರಳಿದ್ದಾರೆ. ಅಲ್ಲಿನ ಸರ್ರೆ ತಂಡದೊಂದಿಗೆ ಫಿಂಚ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ವೇಳೆ ಟಿಕೆಟ್ ಹಾಗೂ ಪಾಸ್'ಪೋರ್ಟ್‌ನ ಫೋಟೊ ತೆಗೆದು ಟ್ವೀಟ್ ಮಾಡಿರುವ ಫಿಂಚ್, ‘ಉದ್ಯೋಗಸ್ಥನಾಗಿದ್ದು ಸಂತಸವನ್ನುಂಟು ಮಾಡಿದೆ. ಶೀಘ್ರದಲ್ಲೇ ಲಂಡನ್ ತಲುಪಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾಗೆ ಫಿಂಚ್ ತಿರುಗೇಟು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಡೇವಿಡ್ ವಾರ್ನರ್ ‘ನನ್ನ ಬಗ್ಗೆಯೂ ಸ್ವಲ್ಪ ಹೇಳಿ, ಆಡುವ ಅವಕಾಶ ಕೊಡಿಸು’ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.