ಚಿನ್ನ ಗೆದ್ದ ಹಿಮಾ ದಾಸ್‌ಗೆ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಹುಮಾನ

First Published Jul 15, 2018, 11:48 AM IST
Highlights

ದರ್ಲೆಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆದ ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಿಮಾ ದಾಸ್‌ಗೆ ಬಹುಮಾನಗಳು ಹರಿದುಬರುತ್ತಿದೆ. ಇದೀಗ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ 10 ಲಕ್ಷ ರೂಪಾಯಿ ಬಗುಮಾನ ಘೋಷಿಸಿದ್ದಾರೆ.
 

ಬೆಂಗಳೂರು(ಜು.15): ವಿಶ್ವ ಅಂಡರ್-20  ಅಥ್ಲೆಟಿಕ್ಸ್ ಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತದ ಯುವ ಮಹಿಳಾ ಅಥ್ಲೀಟ್ ಹಿಮಾ ದಾಸ್‌ಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ₹10 ಲಕ್ಷ ಬಹುಮಾನ ನೀಡಲಿದ್ದಾರೆ. 

ತಮ್ಮ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ಹಿಮಾಗೆ ನಗದು ಬಹುಮಾನ ನೀಡುವುದಾಗಿ ಶನಿವಾರ ಅವರು ಟ್ವೀಟರ್‌ನಲ್ಲಿ ತಿಳಿಸಿದರು. ಇದೇ ವೇಳೆ ಹಿಮಾ ಸಾಧನೆಯನ್ನು ಪರಮೇಶ್ವರ್ ಕೊಂಡಾಡಿದ್ದಾರೆ. 

ಐಎಎಎಫ್ ವರ್ಲ್ಡ್ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಗೆದ್ದು ವಿಶ್ವಮಟ್ಟದಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದ್ದರು. 400 ಮೀಟರ್ ಓಟದಲ್ಲಿ ಹಿಮಾ ದಾಸ್ ಪ್ರಬಲ ಸ್ಪರ್ಧಿಗಳಾದ ರೊಮೆನಿಯಾದ ಆಂಡ್ರೆ ಮಿಕ್ಲೋಸ್ ಹಾಗೂ ಅಮೇರಿಕಾದ ಟೈಲರ್ ಮ್ಯಾನ್ಸನ್ ಅವರನ್ನ ಹಿಂದಿಕ್ಕಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. 

ಹಿಮಾ ದಾಸ್ ಸಾಧನೆಯನ್ನ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದರು. ಟ್ವಿಟರ್ ಮೂಲಕ ವೀಡಿಯೋ ಅಪ್‌ಲೋಡ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. 

click me!