
ಆಸ್ಟ್ರೇಲಿಯಾ(ಜೂನ್.10): ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ಕೆನಡಾ ಟಿ-ಟ್ವಿಂಟಿ ಲೀಗ್ ಆಡಲು ಸಜ್ಜಾಗಿದ್ದಾರೆ.
ಒಂದು ವರ್ಷದ ನಿಷೇಧದಿಂದ ಅಂತಾರಾಷ್ಟ್ರೀಯ ಹಾಗೂ ದೇಸಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ ಸ್ಮಿತ್ ಹಾಗೂ ವಾರ್ನರ್ ಈ ಬಾರಿಯ ಐಪಿಎಲ್ ಪಂದ್ಯದಿಂದಲೂ ಹೊರಗುಳಿಯಬೇಕಾಯಿತು. ಐಪಿಎಲ್ ಟೂರ್ನಿಯಲ್ಲಿ ಸ್ಮಿತ್ ಹಾಗೂ ವಾರ್ನರ್ ತಲಾ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಕೆನಡಾದಲ್ಲಿ ಆರಂಭವಾಗಲಿರುವ ಟಿ-ಟ್ವೆಂಟಿ ಲೀಗ್‌ನಲ್ಲಿ ಇವರ ಸಂಭಾವನೆ ತೀರಾ ಕಡಿಮೆ.
ಕೆನಾಡ ಟಿ20 ಲೀಗ್ ಟೂರ್ನಿಯಲ್ಲಿ ಆಡೋ ಸ್ಟೀವ್ ಸ್ಮಿತ್ ಸಂಭಾವನೆ 67.52 ಲಕ್ಷ ರೂಪಾಯಿ. ಇನ್ನು ಡೇವಿಡ್ ವಾರ್ನರ್ ಸಂಭಾವನೆ 60.76 ಲಕ್ಷ ರೂಪಾಯಿ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 12 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದ ಈ ಕ್ರಿಕೆಟಿಗರು ಇದೀಗ ಬಾಲ್ ಟ್ಯಾಂಪರ್‌ನಿಂದ ಸಂಭಾವನೆಯಲ್ಲೂ ಭಾರಿ ಇಳಿಕೆ ಕಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.