ಕ್ರಿಕೆಟ್ ಸೀಕ್ರೆಟ್: ಜೂನ್.10ರ ವಿಶೇಷತೆ ಏನು?

Published : Jun 10, 2018, 08:13 PM ISTUpdated : Jun 10, 2018, 09:48 PM IST
ಕ್ರಿಕೆಟ್ ಸೀಕ್ರೆಟ್: ಜೂನ್.10ರ ವಿಶೇಷತೆ ಏನು?

ಸಾರಾಂಶ

ಕ್ರಿಕೆಟ್ ಇತಿಹಾಸದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜೂನ್. 10 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಜೂನ್.10): ಈ ದಿನ ಭಾರತೀಯರು ಯಾರು ಮರೆಯುವುದಿಲ್ಲ. ಕಾರಣ ಇದೇ ದಿನ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದ ದಿನ. ಅದು ಜೂನ್.10, 1986ರಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಚ್ ರೋಚಕ ಘಟ್ಟ ತಲುಪಿತ್ತು. ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ಭಾರತ ಇತಿಹಾಸ ರಚಿಸಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 294 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ 341 ರನ್ ಸಿಡಿಸಿತು.  ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 47 ರನ್‌ಗಳ ಮುನ್ನಡೆ ಪಡೆದುಕೊಂಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 180  ರನ್ ಸಿಡಿಸಿದ ಇಂಗ್ಲೆಂಡ್ ಭಾರತಕ್ಕೆ 134 ರನ್‌ಗಳ ಟಾರ್ಗೆಟ್ ನೀಡಿತ್ತು.

134 ರನ್‌ಗಳ ಸುಲಭ ಗುರಿ ಪಡೆದ ಭಾರತ 78 ರನ್ ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಾಯಕ ಕಪಿಲ್ ದೇವ್ ಹಾಗೂ ರವಿ ಶಾಸ್ತ್ರಿ ಜೊತೆಯಾಟದಿಂದ ಭಾರತ  ಚೇತರಿಸಿಕೊಂಡಿತು. ಕಪಿಲ್ 10 ಎಸೆತದಲ್ಲಿ 23 ರನ್ ಸಿಡಿಸಿ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?